ಶ್ರೀನಗರ: ಸೇನಾ ವಾಹನವನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ ಪರಿಣಾಮ ಇಬ್ಬರು ಯೋಧರು, ಇಬ್ಬರು ನಾಗರೀಕರು ಮೃತಪಟ್ಟಿರುವ ಘಟನೆ ಜಮ್ಮು-ಕಾಶ್ಮೀರದ (Jammu-Kashmir) ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್ನಲ್ಲಿ ನಡೆದಿದೆ.
18-ರಾಷ್ಟ್ರೀಯ ರೈಫಲ್ಸ್ (RR)ನ ಸೇನಾ ವಾಹನವನ್ನು ಬೋಟಪಾತ್ರ್‌ನ ನಾಗಿನ್ ಧೋಕ್ ಪ್ರದೇಶದಲ್ಲಿ ದಾಳಿ ನಡೆದಿದ್ದು, ಈ ಪ್ರದೇಶವು ಎಲ್ಒಸಿಗೆ ಹತ್ತಿರದಲ್ಲಿದೆ.
Some exchange of fire took place between forces and terrorists in Butapathri sector of District Baramulla around Nagin post.
Further details will be shared after verifying facts. 1/2@JmuKmrPolice@KashmirPolice@DIGBaramulla @Zaidmalik76— Baramulla Police (بارہمولہ پولیس) (@BaramullaPolice) October 24, 2024
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರು ಹಾಗೂ ನಾಗರೀಕರು ಮೃತಪಟ್ಟಿದ್ದು, ಮೂವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಗುಲ್ಮಾರ್ಗ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸೇನೆ ಸುತ್ತುವರೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುಲ್ವಾಮಾ ಜಿಲ್ಲೆಯ ಬಟ್ಗುಂಡ್ ತ್ರಾಲ್ ಪ್ರದೇಶದಲ್ಲಿ ಭಯೋತ್ಪಾದಕರು ಕಾರ್ಮಿಕನೊಬ್ಬನ ಮೇಲೆ ಗುಂಡು ಹಾರಿಸಿ ಗಾಯಗೊಂಡ ಕೆಲವೇ ಗಂಟೆಗಳ ನಂತರ ಈ ದಾಳಿ ನಡೆದಿದೆ. ಗಾಯಗೊಂಡಿರುವ ಕಾರ್ಮಿಕನನ್ನು ಉತ್ತರ ಪ್ರದೇಶದ ನಿವಾಸಿ ಪ್ರೀತಮ್ ಸಿಂಗ್ ಎಂದು ಗುರುತಿಸಲಾಗಿದೆ.
Muda Scam| ಪ್ರಾಸಿಕ್ಯೂಷನ್ಗೆ ಅನುಮತಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ CM Siddaramaiah
ತಪಾಸಣೆ ಮಾಡಲು ಮುಂದಾದ ಪೊಲೀಸ್ ಪೇದೆಯನ್ನೇ ಬಾನೆಟ್ ಮೇಲೆ ಹೊತ್ತೊಯ್ದ Car ಚಾಲಕ