ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರ ಸುತ್ತ ನಡೆದ ಪಕ್ಷಿ ಗಣತಿ 10ನೇ ಆವೃತ್ತಿಯಲ್ಲಿ 2 ಹೊಸ ಪಕ್ಷಿಗಳನ್ನು ಗುರುತಿಸಲಾಗಿದೆ.
ಕೈಗಾ ಕೇಂದ್ರದ ಪರಿಸರ ಮುಂದಾಳತ್ವದಲ್ಲಿ ಆಯೋಜಿಸಿದ್ದ ಬರ್ಡ್ ಮ್ಯಾರಥಾನ್ನಲ್ಲಿ ಶಿರಸಿಯ ಅರಣ್ಯ ಮಹಾವಿದ್ಯಾಲಯ, ವೈಲ್ಡ್ ಲೈಫ್ ಇನ್ಸಿ್ಟಟ್ಯೂಟ್ ಆಫ್ ಇಂಡಿಯಾ, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಆಸಕ್ತ ಕೈಗಾ ನೌಕರರು ಹಾಗೂ ಅವರ ಕುಟುಂಬಸ್ಥರು ಸೇರಿ 140 ಪಕ್ಷಿ ಪ್ರಿಯರು ಕಾಡಿಗಿಳಿದು ಇಡೀ ದಿನ ದಾಖಲಾತಿ ನಡೆಸಿದರು. ಈ ವೇಳೆ ಚೊಟ್ಟೆ ಎಲೆ ಉಯಿಲಕ್ಕಿ ಅಥವಾ ವೆಸ್ಟರ್ನ್ ಕ್ರೌನ್ ರ್ವ್ಲಬರ್ ಹಾಗೂ ಕಿರು ಕಾಜಾಣ ಅಥವಾ ಲೀಸರ್ ಕೆಸ್ಟ್ರೆಲ್ ಎಂಬ ಎರಡು ಹೊಸ ಪಕ್ಷಿಗಳನ್ನು ಗುರುತಿಸಲಾಯಿತು. 10 ವರ್ಷದಲ್ಲಿ ಕೈಗಾ ಸುತ್ತ 290 ಪಕ್ಷಿ ಪ್ರಭೇದಗಳಿರುವುದನ್ನು ಬರ್ಡ್ ಮ್ಯಾರಥಾನ್ ಮೂಲಕ ಗುರುತಿಸಿದಂತಾಗಿದೆ.