ನೆರೆ ಸಂತ್ರಸ್ತರಿಗೆ ನೀಡಿದ ವಸ್ತುಗಳನ್ನು ದುರುಪಯೋಗ ಪಡಿಸಿಕೊಂಡ ಇಬ್ಬರು ಅಧಿಕಾರಿಗಳ ಬಂಧನ

ಕೇರಳ: ನೆರೆ ಸಂತ್ರಸ್ತರಿಗಾಗಿ ದಾನಿಗಳು ನೀಡಿದ್ದ ವಸ್ತುಗಳನ್ನು ದುರುಪಯೋಗ ಪಡಿಸಿಕೊಂಡ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ವಯನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಕುರಿತು ಮಾತನಾಡಿದ ಹಿರಿಯ ಪೊಲೀಸ್​ ಅಧಿಕಾರಿ, “ಹಿರಿಯ ಸರ್ಕಾರಿ ಅಧಿಕಾರಿ ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಧಾವಿಸಿದೆವು. ಎಸ್​.ಥಾಮಸ್​ ಹಾಗೂ ಎಂ.ಪಿ.ದಿನೇಶ್​ ಎಂಬ ಅಧಿಕಾರಿಗಳು ಪರಿಹಾರ ಕೇಂದ್ರಕ್ಕೆ ತಲುಪಿಸಬೇಕಾದ ವಸ್ತುಗಳನ್ನು ಬೇರೆಡೆ ತಲುಪಿಸುತ್ತಿರುವುದು ಖಚಿತವಾಯಿತು. ಹಾಗಾಗಿ ಅವರನ್ನು ಬಂಧಿಸಿದ್ದೇವೆ” ಎಂದಿದ್ದಾರೆ.

ಬಂಧಿತ ಅಧಿಕಾರಿಗಳು ಮತ್ತೊಂದು ಪರಿಹಾರ ಕೇಂದ್ರಕ್ಕೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು ಎಂದರು. ಆದರೆ ವಿಚಾರಣೆ ವೇಳೆ ಅಧಿಕಾರಿಗಳು ಹೇಳಿದ್ದು ಸುಳ್ಳು ಎಂಬುದು ತಿಳಿದು ಬಂದಿದೆ ಎಂದರು.

ಭಾರಿ ಮಳೆಯಿಂದ ತತ್ತರಿಸಿ ಪ್ರವಾಹ ಎದುರಿಸಿ ನೆರೆ ಪರಿಹಾರ ಕೇಂದ್ರ ಸೇರಿದ್ದ ಕೇರಳದ ಸಂತ್ರಸ್ತರಿಗಾಗಿ ದೇಶದ ಹಲವೆಡೆಯಿಂದ ದಾನಿಗಳು, ಸ್ವಯಂಸೇವಾ ಸಂಸ್ಥೆಗಳು ದಿನಬಳಕೆಯ ವಸ್ತುಗಳು, ಆಹಾರ ಪದಾರ್ಥಗಳನ್ನು ಕಳುಹಿಸಿಕೊಡುತ್ತಿದೆ. ಈ ಪ್ರವಾಹದಲ್ಲಿ ಒಟ್ಟು 370 ಕನರು ಮೃತಪಟ್ಟಿದ್ದರೆ, ಲಕ್ಷಾಂತರ ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು. (ಏಜೆನ್ಸೀಸ್​)