ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾಗಿರುವ ಉತ್ತರ ಪ್ರದೇಶದ ವಾರಣಾಸಿಯು ಬುಧವಾರದಂದು ಒಂದು ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದೆ. ಇಲ್ಲಿನ ಹಳ್ಳಿಯೊಂದರಲ್ಲಿ ಎಮ್ಮೆಯು ಎರಡು ತಲೆ ಹೊಂದಿರುವ ಕರುವಿಗೆ ಜನ್ಮ ನೀಡಿದೆ.
ವಾರಣಾಸಿಯ ಕ್ಯಾಂಟ್ ಪ್ರದೇಶದ ಸಿಕ್ರೋಲ್ ವಾರ್ಡ್ನಲ್ಲಿ ಇಂತಹ ಅಚ್ಚರಿಯ ಘಟನೆ ನಡೆದಿದೆ. ಸ್ಥಳೀಯರೊಬ್ಬರ ಮನೆಯಲ್ಲಿ ಸಾಕಿದ್ದ ಎಮ್ಮೆ ತುಂಬು ಗರ್ಭಿಣಿಯಾಗಿದ್ದು, ಇಂದು ಬೆಳಗ್ಗೆಯಿಂದಲೂ ಹೆರಿಗೆ ನೋವಿನಲ್ಲಿ ಒದ್ದಾಡುತ್ತಿತ್ತು. ಸಾಕಷ್ಟು ಕಷ್ಟ ಪಟ್ಟರೂ ಕರು ಹೊರಗೆ ಬಂದಿರಲಿಲ್ಲ. ಮೊದಲಿಗೆ ಕರುವಿವ ಎರಡು ಮುಖ ಕಾಣಿಸಿಕೊಂಡಿದೆ. ಅದನ್ನು ಕಂಡ ಜನರು ಬಹುಶಃ ಎರಡು ಕರುವಿದ್ದಿರಬಹುದೇ ಎಂದು ಅಚ್ಚರಿಯಿಂದ ನೋಡಲಾರಂಭಿಸಿದ್ದಾರೆ. ಅದಾದ ಕೆಲ ಕ್ಷಣಗಳಲ್ಲಿ ಕರು ಹೊರಗೆ ಬಂದಿದ್ದು, ಎರಡೂ ತಲೆ ಒಂದೇ ದೇಹದಲ್ಲಿರುವುದನ್ನು ಕಂಡು ಜನರು ಆಶ್ಚರ್ಯಚಕಿತರಾಗಿದ್ದಾರೆ.
ಈ ಸುದ್ದಿ ಸುತ್ತಮುತ್ತದ ಹಳ್ಳಿಗಳಿಗೂ ತಲುಪಿದೆ. ಜನರು ಈ ವಿಶೇಷ ಎಮ್ಮೆ ಮತ್ತು ಕರುವನ್ನು ನೋಡಲು ದೂರದ ಊರುಗಳಿಂದ ಬರಲಾರಂಭಿಸಿದ್ದಾರೆ. ಎಮ್ಮೆ ಕರು ಎರಡೂ ಆರೋಗ್ಯವಾಗಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಅತ್ತೆ ಮಾವನ ಜವಾಬ್ದಾರಿ ಅಳಿಯನಿಗೂ ಸೇರಿದ್ದು; ಅಳಿಯನಿಂದಲೂ ಜೀವನಾಂಶ ಪಡೆಯಬಹುದು
ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂ ಈಗ ನರೇಂದ್ರ ಮೋದಿ ಸ್ಟೇಡಿಯಂ..!