More

    ಇಂದಿನಿಂದ 2 ದಿನ ಬ್ಯಾಂಕ್ ಬಂದ್; ಎಟಿಎಂ ಸೇವೆ ಅಭಾದಿತ

    ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್​ಗಳ ನೌಕರರ ಒಕ್ಕೂಟ 2 ದಿನಗಳ ಮುಷ್ಕರಕ್ಕೆ ಕೊಟ್ಟಿರುವುದರಿಂದ ಶುಕ್ರವಾರದಿಂದ ಮೂರು ದಿನ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

    ಶುಕ್ರವಾರ ಮತ್ತು ಶನಿವಾರ ಮುಷ್ಕರ ನಡೆದರೆ ಭಾನುವಾರ ಸಾರ್ವತ್ರಿಕ ರಜೆ ಇರುವುದರಿಂದ ಸೋಮವಾರವಷ್ಟೇ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ಸಿಗಲಿದೆ.

    ನೌಕರರ ಪಿಂಚಣಿ ಪರಿಷ್ಕರಣೆ, ಶೇ.20 ವೇತನ ಹೆಚ್ಚಳ, ವಾರದಲ್ಲಿ 5 ದಿನ ಮಾತ್ರ ಕರ್ತವ್ಯ ನಿರ್ವಹಣೆ, ನೂತನ ಪಿಂಚಣಿ ಯೋಜನೆ ರದ್ದು, ಮೂಲ ವೇತನದೊಂದಿಗೆ ವಿಶೇಷ ಭತ್ಯೆ ಸೇರಿಸುವುದು ಸೇರಿ 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಕರೆ ನೀಡಲಾಗಿದೆ. ಬಹುತೇಕ ಎಲ್ಲ ರಾಷ್ಟ್ರೀಕೃತ ಬ್ಯಾಂಕ್​ಗಳ ಅಧಿಕಾರಿ, ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಎಟಿಎಂ ಹಾಗೂ ಆನ್​ಲೈನ್ ಬ್ಯಾಂಕಿಂಗ್ ಸೇವೆ ಎಂದಿನಂತೆ ಇರುವುದರಿಂದ ಸಾರ್ವಜನಿಕರಿಗೆ ಹೆಚ್ಚು ಮುಷ್ಕರದ ಬಿಸಿ ತಟ್ಟುವುದಿಲ್ಲ ಎಂದು ಹೇಳಲಾಗುತ್ತಿದೆ.

    ಮಾರ್ಚಲ್ಲೂ ಮುಷ್ಕರ: 2 ದಿನಗಳ ಮುಷ್ಕರ ಬಳಿಕವೂ ಬೇಡಿಕೆ ಈಡೇರದಿದ್ದರೆ ಮಾ.11ರಿಂದ 13ರವರೆಗೆ ಮತ್ತೆ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಆಗಲೂ ಯಾವುದೇ ಪ್ರಯೋಜನವಾಗದಿದ್ದರೆ ಏ.1ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡುವುದಾಗಿ ಒಕ್ಕೂಟ ತಿಳಿಸಿದೆ. ಮುಂದಿನ ಮುಷ್ಕರದ ದಿನಾಂಕದವರೆಗೆ ವಿವಿಧ ರೀತಿಯಲ್ಲಿ ಪ್ರತಿಭಟಿಸಲಾಗುತ್ತದೆ. ಪ್ರಮುಖವಾಗಿ ಕಚೇರಿ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದು, ಕಪು್ಪ ಪಟ್ಟಿ ಧರಿಸಿ ಕೆಲಸ ಮಾಡುವುದು, ಮೇಣದ ಬತ್ತಿ ಹಿಡಿದು ಪ್ರತಿಭಟನೆಯಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    20ರಿಂದಲೇ ಪ್ರತಿಭಟನೆ

    ಬ್ಯಾಂಕ್ ಉದ್ಯೋಗಿಗಳಿಗೆ 2017ರ ನವೆಂಬರ್​ನಿಂದ ವೇತನ ಹೆಚ್ಚಳವಾಗಿಲ್ಲ. ಅದನ್ನು ಪ್ರಮುಖವಾಗಿಟ್ಟು ಕೊಂಡು ಮುಷ್ಕರ ನಡೆಸಲಾಗುತ್ತಿದೆ. ಅಲ್ಲದೆ ಬೇಡಿಕೆಗಳ ಈಡೇರಿಕೆ ಕುರಿತಂತೆ ಈಗಾಗಲೇ ಕೇಂದ್ರ ಸರ್ಕಾರ ಮತ್ತು ಬ್ಯಾಂಕ್ ಆಡಳಿತ ಮಂಡಳಿಗಳ ಗಮನಕ್ಕೆ ತಂದಿದ್ದರೂ ಬೇಡಿಕೆ ಈಡೇರಿಕೆ ಭರವಸೆ ಸಿಗದ ಹಿನ್ನೆಲೆಯಲ್ಲಿ ಮುಷ್ಕರ ನಡೆಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts