ಭದ್ರಾವತಿಯ ಕೊಮಾರನಹಳ್ಳಿಯಲ್ಲಿ ಕೋಣಗಳ ಅರೆಸ್ಟ್; ರಿಲೀಸ್​ಗಾಗಿ ಪಟ್ಟು ಹಿಡಿದ ಗ್ರಾಮಸ್ಥರು

ಶಿವಮೊಗ್ಗ: ಭದ್ರಾವತಿ ತಾಲೂಕಿನ ಕೊಮಾರನಹಳ್ಳಿಯಲ್ಲಿ ಮಾರಿ ಹಬ್ಬಕ್ಕೆ ಬಿಟ್ಟಿದ್ದ ಕೋಣಗಳನ್ನೇ ಪೊಲೀಸರು ಅರೆಸ್ಟ್ ಮಾಡಿ ಉದ್ದೇಶಿತ ಬಲಿಯನ್ನು ತಪ್ಪಿಸಿದ್ದಾರೆ. ಆದರೆ, ಕೋಣಗಳ ರಿಲೀಸ್​ಗಾಗಿ ಗ್ರಾಮಸ್ಥರು ಇನ್ನಿಲ್ಲದ ಒತ್ತಡ ಹೇರುತ್ತಿದ್ದಾರೆ.

ಈ ಗ್ರಾಮದಲ್ಲಿ ಮಂಗಳವಾರದಿಂದ ಮೂರು ದಿನ ಮಾರಿಹಬ್ಬ ನಡೆಯಲಿದ್ದು. ಹಬ್ಬಕ್ಕೆ ಬಿಟ್ಟಿದ್ದ ಎರಡು ಕೋಣಗಳನ್ನು ಬಲಿಕೊಡಲಿದ್ದಾರೆ ಎಂಬ ಶಂಕೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆದರೆ, ಪೂಜೆಗೆ ಈ ಕೋಣಗಳು ಬೇಕೇ ಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮುತ್ತುರಾಜ್ ಭೇಟಿ ನೀಡಿದ್ದು, ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.

Leave a Reply

Your email address will not be published. Required fields are marked *