More

  2.5 ಲಕ್ಷ ಕೋಟಿ ರೂಪಾಯಿ ಬಳಕೆಯ ಮೌಲ್ಯಮಾಪನ: ಐಸೆಕ್ ಸಂಸ್ಥೆಗೆ ಜವಾಬ್ದಾರಿ

  | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

  ಅನುಸೂಚಿತ ಜಾತಿ ಉಪ ಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ (ಎಸ್​ಸಿಎಸ್​ಪಿ, ಟಿಎಸ್​ಪಿ) ಅಧಿನಿಯಮದ ಅನ್ವಯ 2013ರಿಂದ ಹಂಚಿಕೆಯಾದ ಅನುದಾನಗಳ ಮೌಲ್ಯಮಾಪನಕ್ಕೆ ನಿರ್ಧರಿಸಿರುವ ಸರ್ಕಾರ, ಐಸೆಕ್ ಸಂಸ್ಥೆಗೆ ಜವಾಬ್ದಾರಿ ನೀಡಿದೆ. ಸಾಮಾಜಿಕ ಹಾಗೂ ಆರ್ಥಿಕ ಪರಿವರ್ತನಾ ಸಂಸ್ಥೆಯು ಹತ್ತು ವರ್ಷಗಳಲ್ಲಿ ಎಸ್​ಸಿಎಸ್​ಪಿ, ಟಿಎಸ್​ಪಿ ಕಾಯ್ದೆಯ ಅನುಸಾರ ಬಿಡುಗಡೆಯಾದ ಅನುದಾನ ಹಾಗೂ ಅದರಿಂದ ಆಗಿರುವ ಪರಿಣಾಮ, ಪರಿವರ್ತನೆಗಳ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡಲಿದೆ.

  38 ಯೋಜನೆ: ವಿವಿಧ ಇಲಾಖೆಗಳಿಂದ ಅನುಷ್ಠಾನ ಮಾಡಿರುವ 38 ಯೋಜನೆಗಳಿಂದ ಪ.ಜಾತಿ, ಪ.ಪಂಗಡದವರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯಲ್ಲಿ ಆಗಿರುವ ಪರಿಣಾಮಗಳ ಬಗ್ಗೆ ಹಾಗೂ ಜೀವನಮಟ್ಟ ಸುಧಾರಣೆಯಾಗಿರುವ ಮೌಲ್ಯಮಾಪನ ಈ ವೇಳೆ ನಡೆಯಲಿದೆ. ಈ ಕಾರ್ಯಕ್ಕಾಗಿ ಸರ್ಕಾರ 75 ಲಕ್ಷ ರೂಪಾಯಿಯನ್ನು ಐಸೆಕ್ ಸಂಸ್ಥೆಗೆ ನೀಡಲಿದೆ.

  2.5 ಲಕ್ಷ ಕೋಟಿ ರೂಪಾಯಿ ಬಳಕೆಯ ಮೌಲ್ಯಮಾಪನ: ಐಸೆಕ್ ಸಂಸ್ಥೆಗೆ ಜವಾಬ್ದಾರಿ

  ಗ್ಯಾರಂಟಿಗೆ ಬಳಕೆ, ಆಕ್ಷೇಪ: ಸಿದ್ದರಾಮಯ್ಯ ಸರ್ಕಾರ 11 ಸಾವಿರ ಕೋಟಿ ರೂ. ಎಸ್​ಸಿಎಸ್​ಪಿ, ಟಿಎಸ್​ಪಿ ಹಣವನ್ನು ಗ್ಯಾರಂಟಿ ಯೋಜನೆಗಾಗಿ ಬಳಸಿಕೊಂಡಿದ್ದನ್ನು ಆಕ್ಷೇಪಿಸಿ ಬಿಜೆಪಿ ನಾಯಕರು ನಿರಂತರವಾಗಿ ದನಿ ಎತ್ತುತ್ತಲೇ ಬಂದಿದ್ದಾರೆ. ಈ ಉಪ ಯೋಜನೆಗಳ ಅಡಿಯಲ್ಲಿ ಮೀಸಲಿಡುವ ಅನುದಾನ ಅನ್ಯ ಉದ್ದೇಶಗಳಿಗೆ ವರ್ಗಾಯಿಸುವಂತಿಲ್ಲ. ಪರಿಶಿಷ್ಟ ಸಮುದಾಯದ ಜನರಿಗೆ ನೇರವಾಗಿ ಅನುಕೂಲವಾಗುವಂತಹ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕು ಎಂಬ ನಿರ್ಬಂಧ ಕಾಯ್ದೆಯಲ್ಲಿದೆ. ಆದರೆ, ಎಸ್​ಸಿಎಸ್​ಪಿ ಮತ್ತು ಟಿಎಎಸ್ಪಿ ಕಾಯ್ದೆಯ ಸೆಕ್ಷನ್ 7ಡಿ ಮೂಲಸೌಕರ್ಯ ಯೋಜನೆಗಳಲ್ಲಿ ಬಳಸುವ ಅನುದಾನವನ್ನು ಪರಿಶಿಷ್ಟರ ಅಭಿವೃದ್ಧಿ ಉದ್ದೇಶಕ್ಕೆ ಬಳಸಲಾಗಿದೆ ಎಂದು ಪರಿಭಾವಿಸಬಹುದು ಎಂಬ ಅಂಶ ಮುಂದಿಟ್ಟುಕೊಂಡು ರಸ್ತೆ, ಸೇತುವೆ ಮಾಡುವ ಅವಕಾಶ ಮಾಡಿಕೊಳ್ಳಲಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಈ ಅವಕಾಶ ಬಳಸಿಕೊಂಡಿದ್ದನ್ನು ಕಾಂಗ್ರೆಸ್ ಆಕ್ಷೇಪಿಸಿತ್ತು. ಈಗ ಕಾನೂನಿಗೆ ತಿದ್ದುಪಡಿ ತಂದು ಈ ರೀತಿ ಬಳಸದಂತೆ ಚೌಕಟ್ಟು ವಿಧಿಸಲಾಗಿದೆ.

  ಎಷ್ಟು ಮೊತ್ತ?: ಎಸ್​ಸಿಎಸ್​ಪಿ, ಟಿಎಸ್​ಪಿ ಅಧಿನಿಯಮ, 2013 ಮತ್ತು ನಿಯಮಗಳ ಅನ್ವಯ ಪ.ಜಾತಿ, ಪ.ಪಂಗಡದ ಸಮಗ್ರ ಅಭಿವೃದ್ಧಿಗಾಗಿ ಜನಸಂಖ್ಯೆ ಆಧಾರದಲ್ಲಿ ಆಯವ್ಯಯ ಹಂಚಿಕೆ ಮಾಡಿ ವಿವಿಧ ಇಲಾಖೆಗಳ ಮೂಲಕ ಕಾರ್ಯಕ್ರಮ ನುಷ್ಠಾನ ಮಾಡಲಾಗುತ್ತಿದೆ. ಕಾಯ್ದೆ ಜಾರಿಯಾದ ಇಲ್ಲಿಯವರೆಗೂ ಎರಡೂವರೆ ಲಕ್ಷ ಕೋಟಿ ರೂ. ಈ ಉದ್ದೇಶಕ್ಕೆ ಹಂಚಿಕೆಯಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ತೀರ್ಮಾನ ಇದಾಗಿದ್ದು, ಉದ್ದೇಶ ಒಂದಕ್ಕೆ ಇಷ್ಟು ದೊಡ್ಡ ಹಣ ಮೀಸಲಾಗಿದ್ದು ಮತ್ತು ಅದಕ್ಕೆ ಕಾನೂನಿನ ಚೌಕಟ್ಟು ಇರುವುದು ವಿಶೇಷ. ಯಾವ ಸರ್ಕಾರ ಬಂದರೂ ಕಾನೂನು ಪ್ರಕಾರ ಇಲಾಖಾ ವಾರು ಈ ಸಮುದಾಯಕ್ಕೆ ಹಣ ಮೀಸಲಿಟ್ಟು ಕಾರ್ಯಕ್ರಮ ರೂಪಿಸಿ ಅನುಷ್ಠಾನ ಮಾಡಬೇಕಾಗುತ್ತದೆ. ಯಾವ ರೀತಿ ಖರ್ಚಾಗುತ್ತಿದೆ, ಪ್ರಗತಿ ಯಾವ ಹಂತದಲ್ಲಿದೆ ಎಂದು ಆಗಿಂದಾಗ್ಗೆ ಪರಿಶೀಲಿಸುವ ವ್ಯವಸ್ಥೆಯೂ ಇದೆ.

  ಹೆಚ್ಚು ಪ್ರಮಾಣದಲ್ಲಿ ಕ್ಷೇತ್ರಕ್ಕೆ ಹಣ ವಿನಿಯೋಗ: ಹತ್ತು ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಕ್ಷೇತ್ರಕ್ಕೆ ಹಣ ವಿನಿಯೋಗ ಆಗುತ್ತಿದೆ. ಸಹಜವಾಗಿ ಒಂದಷ್ಟು ಪರಿವರ್ತನೆ ಆಗಿರಬಹುದು, ಅದರ ಬಗ್ಗೆ ನಿಖರ ಮಾಹಿತಿ ಇಲ್ಲ. ಇದನ್ನು ವೈಜ್ಞಾನಿಕವಾಗಿ ಕಂಡುಕೊಳ್ಳುವ ಉದ್ದೇಶದಿಂದ ಹಾಗೂ ಆ ಕ್ಷೇತ್ರದ ಈಗಿನ ನಿರೀಕ್ಷೆಗಳೇನು ಎಂದು ಕಂಡುಕೊಳ್ಳುವ ಪ್ರಯತ್ನವನ್ನು ಈ ಮೂಲಕ ಮಾಡಲಾಗುತ್ತಿದೆ. ಹತ್ತು ವರ್ಷದಿಂದ ಕೆಲವೇ ಉದ್ದೇಶಗಳಿಗೆ ಹಣ ಖರ್ಚು ಮಾಡಲಾಗುತ್ತಿದೆ. ಮಾಡಿದ ಕೆಲಸವನ್ನೇ ಪುನಃ ಮಾಡಲಾಗುತ್ತಿದೆಯೇ ಎಂಬ ಅನುಮಾನ ಶಾಸನ ಸಭೆ ಸದಸ್ಯರಿಗೂ ಬಂದಿದ್ದು, ಇದರ ಬಗ್ಗೆ ಚರ್ಚೆಗಳು ನಡೆದಿವೆ.

  ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು 

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts