Friday, 16th November 2018  

Vijayavani

Breaking News

2.0 ಬಜೆಟ್ 543 ಕೋಟಿ ರೂ.!

Thursday, 13.09.2018, 2:02 AM       No Comments

ದುವರೆಗೂ ಭಾರತೀಯ ಸಿನಿಮಾ ರಂಗದಲ್ಲಿ ಅತಿ ದುಬಾರಿ ಸಿನಿಮಾ ಎಂಬ ಖ್ಯಾತಿಗೆ ‘ಬಾಹುಬಲಿ’ ಚಿತ್ರ ಪಾತ್ರವಾಗಿತ್ತು. ಇದೀಗ ಆ ಸ್ಥಾನಕ್ಕೆ ‘ಸೂಪರ್ ಸ್ಟಾರ್’ ರಜನಿಕಾಂತ್ ಅಭಿನಯದ ‘2.0’ ಚಿತ್ರ ಲಗ್ಗೆ ಇಟ್ಟಿದೆ. ಚಿತ್ರತಂಡವೇ ನೀಡಿರುವ ಮಾಹಿತಿ ಪ್ರಕಾರ, ಈ ಸಿನಿಮಾಗೆ ಬರೋಬ್ಬರಿ 543 ಕೋಟಿ ರೂ. ಖರ್ಚಾಗಿದೆ! ಚಿತ್ರದಲ್ಲಿ ರಜನಿಕಾಂತ್ ಜತೆಗೆ ತೆರೆಹಂಚಿಕೊಂಡಿರುವ ಬಾಲಿವುಡ್ ನಟ ಅಕ್ಷಯ್ಕುಮಾರ್, ‘2.0 ಭಾರತದ ಮೊದಲ 75 ದಶಲಕ್ಷ ಡಾಲರ್ ಚಿತ್ರ’ ಎಂದು ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಕ್ಷಯ್ಗೆ ಇದು ತಮಿಳಿನಲ್ಲಿ ಚೊಚ್ಚಲ ಚಿತ್ರ. ವಿಶ್ವದಾದ್ಯಂತ 3 ಸಾವಿರ ತಂತ್ರಜ್ಞರು ಈ ಚಿತ್ರಕ್ಕಾಗಿ ದುಡಿದಿದ್ದಾರೆ. ಗಣೇಶ ಚತುರ್ಥಿಯಂದು (ಸೆ.13) ಚಿತ್ರದ ಮೊದಲ 3ಡಿ ಟೀಸರ್ ಬಿಡುಗಡೆಯಾಗಲಿದೆ. ನ.29ಕ್ಕೆ ಚಿತ್ರ ತೆರೆಕಾಣಲಿದೆ ಎನ್ನಲಾಗುತ್ತಿದೆ. ‘2.0’ನಲ್ಲಿ ವಿಭಿನ್ನವಾದ ಲುಕ್​ನಲ್ಲಿ ಕಾಣಿಸಿಕೊಂಡಿರುವ ಅಕ್ಷಯ್, ಚಿತ್ರಕ್ಕಾಗಿ ಧ್ವನಿಯನ್ನು ಕೂಡ ಬದಲಾಯಿಸಿಕೊಂಡಿದ್ದಾರಂತೆ.

ಮೂಲಗಳ ಪ್ರಕಾರ, 15 ಭಾಷೆಗಳಿಗೆ ‘2.0’ ಡಬ್ ಆಗಲಿದೆ. ಚಿತ್ರೀಕರಣೋತ್ತರ ಕೆಲಸಗಳಿಗೆ 100 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. 3ಡಿ ರೂಪದಲ್ಲಿ ಸಿದ್ಧಗೊಂಡಿರುವ ‘2.0’ಗೆ ಶಂಕರ್ ನಿರ್ದೇಶನ ಮಾಡಿದ್ದಾರೆ. ಎ.ಆರ್. ರೆಹಮಾನ್ ಸಂಗೀತವಿರುವ ಈ ಸಿನಿಮಾಕ್ಕೆ ಲೈಕಾ ಸಂಸ್ಥೆ ಹಣ ಹೂಡಿದೆ. ಚಿತ್ರದಲ್ಲಿ ನಾಯಕಿಯಾಗಿ ಆಮಿ ಜಾಕ್ಸನ್ ನಟಿಸಿದ್ದು, ಈ ಮೊದಲು ತೆರೆ ಕಂಡಿದ್ದ ‘ಎಂಧಿರನ್’ ಸಿನಿಮಾದ ಮುಂದುವರಿದ ಭಾಗವಿದು. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top