ರಾಯಚೂರು: ತಾಲೂಕಿನ ಮಮದಾಪುರು ಗ್ರಾಮದ ನಾಗೋಲಿ ಕಟ್ಟೆ ಸಮುದಾಯ ಭವನದಲ್ಲಿ ಎಐಡಿಎಸ್‌ಓ ಜಿಲ್ಲಾ ಘಟಕದಿಂದ ಶುಕ್ರವಾರ ಸಂಜೆ ಸಾವಿತ್ರಿಬಾಯಿ -ÀÅಲೆ ಅವರ ೧೯೪ನೇ ಜನ್ಮದಿನಾಚರಣೆ ಆಚರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಎಐಡಿವೈಒ ಜಿಲ್ಲಾಧ್ಯಕ್ಷ ಚನ್ನಬಸವ ಜÁನೇಕಲ್ ಮಾತನಾಡಿ, ೧೮೩೦ರ ದಶಕದಲ್ಲಿ ಮಹಾರಾಷ್ಟ್ರವು ಒಂದು ಕಡೆ ಬ್ರಿಟಿಷÀರ ಅಽಪತ್ಯಕ್ಕೆ ಒಳಪಟ್ಟರೆ ಇನ್ನೊಂದಡೆ ಪೇಶ್ವೆಗಳ ಆಳ್ವಿಕೆಗೆ ಒಳಪಟ್ಟಿತ್ತು.
ಆ ಕಾಲದಲ್ಲಿ ಸಾಮಾಜಿಕ ವ್ಯವಸ್ಥೆ ಅತ್ಯಂತ ಕ್ರೂರವಾಗಿತ್ತು. ಜÁತಿ ವ್ಯವಸ್ಥೆ ಕಟ್ಟುಪಾಡುಗಳು ಬಿಗಿಯಾಗಿದ್ದವು. ೧೮೩೧ ಜನವರಿ ೩ರಂದು ಹೂ ಮಾರುವ ಮಾಲಿ ಕುಟುಂಬದಲ್ಲಿ ಸಾವಿತ್ರಿಬಾಯಿ ಅವರು ಜನಿಸಿದರು. ತಮ್ಮ ೧೭ನೇ ವಯಸ್ಸಿಗೆ ಶಿಕ್ಷಕಿಯಾಗಿ ಸಮಾಜವನ್ನು ದಿಟ್ಟವಾಗಿ ಎದುರಿಸುವ ಮಹಿಳೆಯಾಗಿ ಬೆಳೆದರು.
ಗಂಡನ ವಿಚಾರಗಳಿಂದ ಆಕರ್ಷಿತರಾದ ಅವರು ಗಂಡನ ಹಾದಿಯಲ್ಲಿ ನಡೆದು ಸಮಾಜದಲ್ಲಿದ್ದ ತಾರತಮ್ಯ, ಮೇಲು-ಕೀಳು ಅಸ್ಪೃಶ್ಯತೆ ಮುಂತಾದ ಅನಿಷÀ್ಟದ ವಿರುದ್ಧ ಹೋರಾಡಲು ಟೊಂಕ ಕಟ್ಟಿ ನಿಂತರು. ಶೂದ್ರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳನ್ನು ತೆರೆದು ಅವರಿಗೆ ನೀಡುವ ಕಾರ್ಯವನ್ನು ಕೈಗೊಂಡರು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ವಿನೋದ್ ಕುಮಾರ್, ಮಾರೆಪ್ಪ , ವೆಂಕೋಬ, ಗುರು, ವೀರೇಶ್, ಮುನಿಸ್ವಾಮಿ, ದೇವರಾಜ್, ವನಮುಕ್ತಿ, ಗುಂಡಪ್ಪ, ಶಿವಪ್ಪ, ಆಂಜನೇಯ, ಯಲ್ಲಪ್ಪ, ಆಂಜನೇಯ ಯಾದವ್, ಯಮನಪ್ಪ , ಎಂ ಹನುಮೇಶ, ಶೇಖರ್, ಭೀಮ, ಹನುಮೇಶ, ಶುಭಕುಮಾರ್ ಸೇರಿ ಅನೇಕರು ಇದ್ದರು.