ಹಸುಗೂಸಿನ ಮೇಲೆ ಅತ್ಯಾಚಾರ ಎಸಗಿದ್ದ ಯುವಕನಿಗೆ ರಾಜಸ್ಥಾನ ಹೊಸ ಕಾಯಿದೆಯಡಿ ಗಲ್ಲು

ಜೈಪುರ: 7 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ ಎಸಗಿದ್ದ 19 ವರ್ಷದ ಯುವಕನಿಗೆ ರಾಜಸ್ಥಾನದ ಕೋರ್ಟ್​ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ರಾಜಸ್ಥಾನ ಸರ್ಕಾರ ಇತ್ತೀಚೆಗೆ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ತಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸುವ ವ್ಯಕ್ತಿಗೆ ಮರಣ ದಂಡನೆ ವಿಧಿಸಲು ಅವಕಾಶ ನೀಡಿ ಹೊಸ ಕಾಯ್ದೆಯನ್ನು ರೂಪಿಸಿತ್ತು. ಈ ಹೊಸ ಕಾಯ್ದೆಯನ್ವಯ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ.

ಮೇ 9 ರಂದು ಅಪರಾಧಿ ಬೇಬಿ ಸಿಟ್ಟಿಂಗ್​ನಿಂದ ಮಗುವನ್ನು ಕರೆದೊಯ್ದಿದ್ದ. ಆ ನಂತರ ಸಮೀಪದ ಮೈದಾನದಲ್ಲಿ ಮಗು ಪತ್ತೆಯಾಗಿತ್ತು. ಆಸ್ಪತ್ರೆಯಲ್ಲಿ ಮಗುವಿನ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿತ್ತು. ಆ ನಂತರ ಪೊಲೀಸರು ಯುವಕನನ್ನು ಬಂಧಿಸಿದ್ದರು.
ಕೋರ್ಟ್​ ಪ್ರಕರಣದ ವಿಚಾರಣೆಯನ್ನು ತ್ವರಿತ ಗತಿಯಲ್ಲಿ ಮುಗಿಸಿ ಅಪರಾಧಿಗೆ ಶಿಕ್ಷೆ ವಿಧಿಸಿದೆ. (ಏಜೆನ್ಸೀಸ್​)