19ಕ್ಕೆ ಡಿ.ಎಸ್. ಮ್ಯಾಕ್ಸ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಬೆಂಗಳೂರು: ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಡಿ.ಎಸ್. ಮ್ಯಾಕ್ಸ್ ಸಂಸ್ಥೆಯ ವಾರ್ಷಿಕೋತ್ಸವ ಅಂಗವಾಗಿ ಭಾರತೀಯ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ಹಾಗೂ ಜೀವಮಾನ ಸಾಧನೆಗಾಗಿ 13 ಜನರಿಗೆ ‘ಡಿ.ಎಸ್. ಮಾಕ್ಸ್ ಕಲಾಶ್ರೀ’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಮಂಗಳವಾರ (ಜೂ.19) ಮಧ್ಯಾಹ್ನ 3.30ಕ್ಕೆ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿರುವ ಸಮಾರಂಭದ ಸಾನ್ನಿಧ್ಯವನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಎಸ್.ಪಿ.ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆಯು ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಅಮೋಘ ಸೇವೆ ಸಲ್ಲಿಸಿದ ಸಾಧಕರಿಗೆ ಗೌರವ ಸಲ್ಲಿಸುವುದು ಸೇರಿ ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.ಬೆಂಗಳೂರು ಇಂದು ಬೃಹದಾಕಾರವಾಗಿ ಬೆಳೆಯುತ್ತಿದೆ. ಬಡವರು, ಮಧ್ಯಮ ವರ್ಗದ ಜನರು ಸ್ವಂತ ಸೂರು ಕಟ್ಟಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಡಿ.ಎಸ್.ಮ್ಯಾಕ್ಸ್ ಸಂಸ್ಥೆ ಜನಸಾಮಾನ್ಯರಿಗೆ ಅಗತ್ಯವಾದ ವಸತಿ ಯೋಜನೆ ರೂಪಿಸಿ ಕಡಿಮೆ ದರದಲ್ಲಿ ಕೊಡುತ್ತಿದೆ ಎಂದು ಹೇಳಿದರು. ಸಂಸ್ಥೆಯ ಹಣಕಾಸು ಮುಖ್ಯಸ್ಥ ಪ್ರಸನ್ನಕುಮಾರ್, ಉಪಾಧ್ಯಕ್ಷ ಶಿವಶಂಕರ್ ಮತ್ತಿತರರು ಇದ್ದರು.

ಪ್ರಶಸ್ತಿ ಪುರಸ್ಕೃತರು

ನಟರಾದ ಶಿವರಾಜ್​ಕುಮಾರ್, ದೇವನ್, ಶಹಬಾಜ್ ಖಾನ್; ನಟಿಯರಾದ ಕೆ.ಆರ್. ವಿಜಯಾ, ಸರಿತಾ, ವನಿತಾ ವಾಸು, ಜಲಜಾ, ಪ್ರಿಯಾಂಕಾ ಉಪೇಂದ್ರ; ನಿರ್ದೇಶಕರಾದ ಪಿ. ವಾಸು, ಪಿ.ಶೇಷಾದ್ರಿ, ರಕ್ಷಿತ್ ಶೆಟ್ಟಿ, ಗಾಯಕರಾದ ವಿಜಯಪ್ರಕಾಶ್, ಕಸ್ತೂರಿ ಶಂಕರ್, ‘ಡಿ.ಎಸ್. ಮ್ಯಾಕ್ಸ್ ಕಲಾಶ್ರೀ’ ಪ್ರಶಸ್ತಿಗೆ ಹಾಗೂ ಉದ್ಯಮಿ ಶ್ರೀನಿವಾಸ್ ರಾವ್ ಕಾಯಕಯೋಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ 15 ಸಾವಿರ ರೂ., ಸ್ಮರಣಿಕೆ ಒಳಗೊಂಡಿದೆ.

ಸಮಾಜಮುಖಿ ಸಂಸ್ಥೆ

ಡಿ.ಎಸ್. ಮ್ಯಾಕ್ಸ್ ಸಂಸ್ಥೆ ಕಳೆದ ಹಲವು ವರ್ಷಗಳಿಂದ ರಂಗಭೂಮಿ, ಚಲನಚಿತ್ರರಂಗದ ಹಿರಿಯ ಚೇತನಗಳನ್ನು ಸನ್ಮಾನಿಸುತ್ತ ಬಂದಿದೆ. ಪ್ರತಿವರ್ಷ ಕನ್ನಡ ರಾಜ್ಯೋತ್ಸವದಂದು ನಾಡಿನ ಖ್ಯಾತ ಸಾಹಿತಿಗಳಿಗೆ ‘ಡಿಎಸ್​ವಾಕ್ಸ್ ಸಾಹಿತ್ಯ ಶ್ರೀ ಪ್ರಶಸ್ತಿ ’ನೀಡಿ ಗೌರವಿಸಿದೆ. ಆರೋಗ್ಯವೇ ಭಾಗ್ಯ ಎಂಬ ಯೋಜನೆಯಡಿಯಲ್ಲಿ ಮೋದಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಪ್ರತಿತಿಂಗಳು ಬಡವರಿಗೆ ಅದರಲ್ಲೂ ಗ್ರಾಮೀಣ ಜನರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸುತ್ತಿದೆ. ಸಾವಿರಾರು ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಅಂಗವಿಕಲರಿಗೆ ತ್ರಿಚಕ್ರ ವಾಹನ ನೀಡುವ ಕಾರ್ಯಕ್ರಮವನ್ನು ನಡೆಸುತ್ತಿದೆ. ಚಿತ್ರದುರ್ಗದ ಶ್ರೀ ಮುರುಘ ರಾಜೇಂದ್ರ ಶ್ರೀ ಶಿವಮೂರ್ತಿ ಶರಣರ ಸಾನ್ನಿಧ್ಯದಲ್ಲಿ ಸಾಮೂಹಿಕ ವಿವಾಹ ನಡೆಸುತ್ತಿದೆ.

ಡಿ.ಎಸ್.ಮ್ಯಾಕ್ಸ್ ಸಂಸ್ಥೆ ರಾಜಧಾನಿಯಲ್ಲಿ 8,500 ಮನೆ ನಿರ್ವಿುಸಿದೆ. 4,500 ಮನೆಗಳು ಮಾರಾಟಕ್ಕಿವೆ. ಸಂಸ್ಥೆಯಲ್ಲಿ 5 ಸಾವಿರ ಉದ್ಯೋಗಿಗಳಿಗೂ ಹಲವು ಸವಲತ್ತುಗಳನ್ನು ಸಂಸ್ಥೆ ಒದಗಿಸಿಕೊಟ್ಟಿದೆ.

| ಎಸ್.ಪಿ. ದಯಾನಂದ್ ಸಂಸ್ಥೆ ನಿರ್ದೇಶಕ

ಉದ್ಯಮದೊಂದಿಗೆ ನಾಡಿನ ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಡಿ.ಎಸ್. ಮ್ಯಾಕ್ಸ್ ಸಂಸ್ಥೆ ಮಾಡುತ್ತಿದೆ.

| ಡಾ. ಕೆ.ವಿ. ಸತೀಶ್, ಡಿ.ಎಸ್. ಮ್ಯಾಕ್ಸ್ ಸಂಸ್ಥೆ ಅಧ್ಯಕ್ಷ ಫ್ಲ್ಯಾಟ್ ಪತ್ನಿ

ವಿಶೇಷ ಕಾರ್ಯಕ್ರಮ

ವಾರ್ಷಿಕೋತ್ಸವ ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮನೆಗಳನ್ನು ಖರೀದಿಸಿರುವ 50 ಮಂದಿಗೆ ಬಹುಮಾನ ನೀಡಲು ಸಂಸ್ಥೆ ನಿರ್ಧರಿಸಿದೆ. ಗ್ರಾಹಕರನ್ನು ಲಾಟರಿ ಮೂಲಕ ನೇರ ಆಯ್ಕೆ ಮಾಡಲಾಗುವುದು.

ಪ್ರಥಮ ಬಹುಮಾನ

ಎರಡು ಬೆಡ್ ರೂಂನ ಒಂದು ಫ್ಲ್ಯಾಟ್

ದ್ವೀತಿಯ ಬಹುಮಾನ

ಒಂದು ಕಾರ್ ಮೂರನೇ ಬಹುಮಾನ

ದ್ವಿಚಕ್ರ ವಾಹನ

ಎಲ್ಲ ಗ್ರಾಹಕರಿಗೂ ವಿಶೇಷ ಉಡುಗೊರೆ ಇರಲಿದೆ.

Leave a Reply

Your email address will not be published. Required fields are marked *