ದೆಹಲಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ: 18 ವಿಮಾನಗಳ ಮಾರ್ಗ ಬದಲಾವಣೆ, ಜನಜೀವನ ಅಸ್ತವ್ಯಸ್ತ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಂದು ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದಿಂದ 14 ದೇಶಿಯ ಹಾಗೂ ನಾಲ್ಕು ಅಂತಾರಾಷ್ಟ್ರೀಯ ವಿಮಾನಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.

ಒಂಭತ್ತು ವಿಮಾನಗಳನ್ನು ಜೈಪುರ ಮಾರ್ಗಕ್ಕೆ ಬದಲಾಯಿಸಿದ್ದು, ಮೂರು ವಿಮಾನಗಳನ್ನು ಲಖನೌ ಹಾಗೂ ಮೂರು ವಿಮಾನಗಳನ್ನು ಅಮೃತಸರದ ಕಡೆಗೆ ತಿರುಗಿಸಲಾಗಿದೆ. ಎರಡು ವಿಮಾನಗಳನ್ನು ವಾರಾಣಸಿ ಕಡೆಗೂ ಒಂದು ವಿಮಾನವನ್ನು ಇಂದೋರ್​ ಕಡೆಗೆ ಮಾರ್ಗ ಬದಲಾಯಿಸಲಾಗಿದೆ ಎಂದು ವಿಮಾನಯಾನ ಮೂಲಗಳು ಮಾಹಿತಿ ನೀಡಿದೆ.

ದೆಹಲಿಯ ಹಲವು ಭಾಗಗಳು ಹಾಗೂ ನೋಯ್ಡಾ, ಫರೀದಾಭಾದ್​ ಸೇರಿದಂತೆ ರಾಷ್ಟ್ರ ರಾಜಧಾನಿಯ ಪಕ್ಕದ ನಗರಗಳು ಇಂದು ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಸಿಲುಕಿ ಜನ ಜೀವನ ಅಸ್ತವ್ಯಸ್ತವಾಗಿದೆ. (ಏಜೆನ್ಸೀಸ್​)