18, 19ರಂದು ಯೋಗ ಮ್ಯಾರಥಾನ್

ಬಾಗಲಕೋಟೆ : ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಮಾಧ್ಯಮ ಸಹಯೋಗ, ಪತಂಜಲಿ ಯೋಗ ಸಮಿತಿ ನೇತೃತ್ವದಲ್ಲಿ ಯೋಗ ಮ್ಯಾರಥಾನ್ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜೂ.18ರಂದು ಸಂಜೆ 4.30 ಗಂಟೆಗೆ ಹಳೇ ಬಾಗಲಕೋಟೆ ನಗರದಲ್ಲಿ ಮ್ಯಾರಥಾನ್ ನಡೆಯಲಿದ್ದು, ಹೊಳೇ ಆಂಜನೇಯ ದೇವಸ್ಥಾನದಿಂದ ಆರಂಭವಾಗುವ ಮ್ಯಾರಥಾನ್ ಸರಾಫಗಲ್ಲಿ, ಟೀಕಿನಮಠ, ಚರಂತಿಮಠ, ಕಾಲೇಜು ರಸ್ತೆ ಮೂಲಕ ಬಸವೇಶ್ವರ ವೃತ್ತಕ್ಕೆ ತಲುಪಿ ಮುಕ್ತಾಯವಾಗಲಿದೆ.

ಜೂ. 19ರಂದು ವಿದ್ಯಾಗಿರಿ ಹಾಗೂ ನವನಗರದಲ್ಲಿ ಮ್ಯಾರಥಾನ್ ಜರುಗಲಿದ್ದು, ಅಂದು ಸಂಜೆ 4.30ಕ್ಕೆ ವಿಶ್ವೇಶ್ವರಯ್ಯ ವಸತಿ ನಿಲಯದಿಂದ ಆರಂಭವಾಗುವ ಮ್ಯಾರಥಾನ್ ಇಂಜಿನಿಯರಿಂಗ್ ವೃತ್ತ ಮಾರ್ಗವಾಗಿ ಕಾಳಿದಾಸ ವೃತ್ತದ ಮೂಲಕ ನವನಗರ ಪ್ರವೇಶಿಸಲಿದೆ. ಬಳಿಕ ನಗರಸಭೆ, ಡಿಸಿಸಿ ಬ್ಯಾಂಕ್, ಎಲ್‌ಐಸಿ ವೃತ್ತದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಯೋಗಾಸಕ್ತರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಪತಂಜಲಿ ಯೋಗ ಜಿಲ್ಲಾ ಪ್ರಭಾರಿ ಎಚ್.ಎನ್. ಇನಾಮದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಎಚ್.ಎನ್. ಇನಾಮದಾರ (9449035550), ಸೀಮಾ ಮಣ್ಣುರ (9449801876), ರಾಜು ದಂಡಗಿ (8310068215) ಸಂಪರ್ಕಿಸಬಹುದು.

Leave a Reply

Your email address will not be published. Required fields are marked *