Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

145 ಎಸೆತ, ಅಜೇಯ 232 ರನ್​: ನ್ಯೂಜಿಲೆಂಡ್​ ಆಟಗಾರ್ತಿಯಿಂದ ವಿಶ್ವದಾಖಲೆ

Thursday, 14.06.2018, 10:09 AM       No Comments

ನವದೆಹಲಿ: ನ್ಯೂಜಿಲೆಂಡ್​ನ ಮಹಿಳಾ ಆಟಗಾರ್ತಿ ಅಮೆಲಿಯಾ ಕೆರ್ ಅವರು ಕ್ರಿಕೆಟ್​ ಇತಿಹಾಸದ ಹೊಸ ದಾಖಲೆಗೆ ಸೇರ್ಪಡೆಯಾಗಿದ್ದಾರೆ. ಐರ್ಲೆಂಡ್​​ ವಿರುದ್ಧ ಡಬ್ಲಿನ್​ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಅಜೇಯ ದ್ವಿಶತಕ(232*) ಬಾರಿಸುವ ಮೂಲಕ ಇದುವರೆಗೂ ಇದ್ದ ದಾಖಲೆಯಲೆಯನ್ನು ಸರಿಗಟ್ಟಿದ್ದಾರೆ.​

ಕೇವಲ 145 ಎಸೆತಗಳಲ್ಲಿ ಅಜೇಯ 232 ರನ್​ ಗಳಿಸುವ ಮೂಲಕ ವೈಯಕ್ತಿಕ ಗರಿಷ್ಠ ರನ್​ ದಾಖಲಿಸಿದ್ದಾರೆ. 17 ವರ್ಷದ ಅಮೆಲಿಯಾ ಕೆರ್ ಅವರು 21ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾದ ಬೆಲಿಂದ್​ ಕ್ಲಾರ್ಕ್ ಮಾಡಿದ್ದ ದಾಖಲೆಯನ್ನು ಮುರಿದ್ದಾರೆ. ಬೆಲಿಂದ ಕ್ಲಾರ್ಕ್​ ಅವರು 1997ರಲ್ಲಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಡೆನ್ಮಾರ್ಕ್​ ವಿರುದ್ಧ 229 ರನ್​ ಗಳಿಸಿ ಮೊದಲ ದ್ವಿಶತಕ ಸಾಧನೆ ಮಾಡಿದ್ದರು.

ಈ ದಾಖಲೆ ಸರಿಗಟ್ಟಿರುವ ಅಮೆಲಿಯಾ ಕೆರ್​ ಅವರು ಪುರುಷ ಮತ್ತು ಮಹಿಳಾ ಕ್ರಿಕೆಟ್​ನಲ್ಲಿ ದ್ವಿಶತಕ ಸಾಧನೆ ಮಾಡಿದ ಕಿರಿಯ ಮಹಿಳಾ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

134 ಎಸೆತಗಳಲ್ಲೇ ದ್ವಿಶತಕ ಸಾಧನೆ ಮಾಡಿದ ಕೆರ್​, ತಾವು ಗಳಿಸಿದ ಅಜೇಯ 232 ರನ್​ಗಳಲ್ಲಿ 31 ಬೌಂಡರಿ ಹಾಗೂ 2 ಸಿಕ್ಸರ್​ ಸಿಡಿಸಿದ್ದಾರೆ. ವೈಯಕ್ತಿಕ ಗರಿಷ್ಠ ರನ್​ ಕೊಡುಗೆಯಿಂದಾಗಿ ನ್ಯೂಜಿಲೆಂಡ್​ ತಂಡ ಎದುರಾಳಿ ಐರ್ಲೆಂಡ್​ ವಿರುದ್ಧ ಮೂರು ವಿಕೆಟ್​ ನಷ್ಟಕ್ಕೆ 440 ರನ್​ ಬೃಹತ್​ ಗುರಿ ನೀಡಿ, ವಿಜಯ ಸಾಧಿಸಿದೆ.

ಗರಿಷ್ಠ ರನ್​ ಗಳಿಸಿದ ಮಹಿಳಾ ಆಟಗಾರರು
# ಅಮೆಲಿಯಾ ಕೆರ್​ 232*( 2018, ಐರ್ಲೆಂಡ್​ ವಿರುದ್ಧ )
# ಬೆಲಿಂದ್​ ಕ್ಲಾರ್ಕ್​ 229 (1997, ಡೆನ್ಮಾರ್ಕ್​ ವಿರುದ್ಧ)
# ದೀಪ್ತಿ ಶರ್ಮಾ 188 (2017, ಐರ್ಲೆಂಡ್​ ವಿರುದ್ಧ)
# ಛಾಮರಿ ಅಟಪಟ್ಟು 178* (2017, ಆಸ್ಟ್ರೇಲಿಯಾ ವಿರುದ್ಧ)
# ಛಾರ್ಲೋಟ್ಟೆ ಎಡ್ವರ್ವಡ್​ 173* (1997, ಐರ್ಲೆಂಡ್​ ವಿರುದ್ಧ)

Leave a Reply

Your email address will not be published. Required fields are marked *

Back To Top