ಹಿಂದಿನ ಲೋಕಸಭೆಗಳಿಗೆ ಹೋಲಿಸಿದರೆ ಪ್ರಸಕ್ತ ಲೋಕಸಭೆ ಕೆಲಸ ಮಾಡಿದ್ದು ಕಡಿಮೆ

ನವದೆಹಲಿ: ಈ ಹಿಂದಿನ ಪೂರ್ಣ ಅವಧಿಯ ಲೋಕಸಭೆಗಳಿಗೆ ಹೋಲಿಸಿದರೆ, ಪ್ರಸಕ್ತ ಲೋಕಸಭೆ ಅತ್ಯಂತ ಕಡಿಮೆ ಅವಧಿ ಕಾರ್ಯನಿರ್ವಹಿಸಿದೆ.

2014-2019ರ ಈ 16ನೇ ಲೋಕಸಭೆಯು ಒಟ್ಟಾರೆ 1,615 ಗಂಟೆಗಳ ಕಾಲ ಕಾರ್ಯ ನಿರ್ವಹಿಸಿದೆ. ಇದರೊಂದಿಗೆ ಅತ್ಯಂತ ಕಡಿಮೆ ಅವಧಿ ಕಾರ್ಯನಿರ್ವಹಿಸಿದ ಲೋಕಸಭೆಯ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಹಿಂದಿನ ಪೂರ್ಣ ಅವಧಿಯ ಲೋಕಸಭೆಗಳು ಸರಾಸರಿ 2,689 ಗಂಟೆಗಳ ಕಾಲ ಕಾರ್ಯನಿರ್ವಹಿಸಿದ್ದವು. ಆದರೆ, 2009-14ರ ಅವಧಿಯ 15ನೇ ಲೋಕಸಭೆಯು ಅತ್ಯಂತ ಕಡಿಮೆ ಅವಧಿ ಕಾರ್ಯನಿರ್ವಹಿಸಿದ್ದು, ಮೊದಲ ಸ್ಥಾನದಲ್ಲಿದೆ ಎಂದು ಶಾಸಕಾಂಗ ಸಂಶೋಧನಾ ಸಮಿತಿ (PRS) ಪ್ರಕಟಿಸಿರುವ ವರದಿಯಲ್ಲಿ ಉಲ್ಲೇಖವಾಗಿದೆ.

ಇನ್ನು ಈ ಲೋಕಸಭೆಯ ಅವಧಿಯಲ್ಲಿ ಒಟ್ಟು 133 ಬಿಲ್​ಗಳು, 45 ಆದೇಶಗಳು ಹೊರಬಿದ್ದಿವೆ.