More

  1,660 ಗ್ರಾಂ ಗಾಂಜಾ ವಶ

  ಉಡುಪಿ: ಮಣಿಪಾಲ ಟೈಗಲ್ ಸರ್ಕಲ್ ಬಳಿ ಶುಕ್ರವಾರ ಪಾನ್‌ಶಾಪ್‌ಗಳಲ್ಲಿ ಗಾಂಜಾ ಮಾರಾಟ ಮಾಡುತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
  ಉತ್ತರ ಪ್ರದೇಶ ಮೂಲದ ರಂಜಿತ್ ಯಾದವ್(21)ಹಾಗೂ ಶೀತಲ್ ಯಾದವ್ (55)ಬಂಧಿತ ಆರೋಪಿಗಳು. ಚಾಕ್ಲೆಟ್ ರೀತಿಯಲ್ಲಿ ಉಂಡೆಗಳ ಮಾದರಿಯಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು. ಆರೋಪಿಗಳ ಪಾನ್‌ಶಾಪ್‌ನಿಂದ 1,660 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆ ವಿಚಕ್ಷಣ ದಳದ ಉಪ ಅಧೀಕ್ಷಕ ಅಶೋಕ್, ಅಬಕಾರಿ ಉಪ ಅಧೀಕ್ಷಕಿ ಶುಭದಾ ಸಿ.ನಾಯಕ್, ನಿರೀಕ್ಷಕಿ ಜ್ಯೋತಿ ಎನ್., ಸಿಬ್ಬಂದಿ ಕಾರ್ಯಚರಣೆಯಲ್ಲಿದ್ದರು. ಮಣಿಪಾಲ ನಗರ ಭಾಗದಲ್ಲಿ ಗಾಂಜಾ ಮಾರಾಟ, ಮಾದಕ ವಸ್ತು ಸೇವನೆ ಕಂಡು ಬಂದಲ್ಲಿ ಸಾರ್ವಜನಿಕರು 9449597114ಗೆ ಮಾಹಿತಿ ನೀಡಲು ಉಡುಪಿ ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts