16 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತರು ಸೇರಿ ಆರು ಜನರಿಂದ ಐದು ದಿನ ಸಾಮೂಹಿಕ ಅತ್ಯಾಚಾರ!

ನವದೆಹಲಿ: 16 ವರ್ಷದ ಬಾಲಕಿಯನ್ನು ರೂಂನಲ್ಲಿ ಕೂಡಿಕಾಕಿ ಮೂವರು ಅಪ್ರಾಪ್ತರು ಸೇರಿ ಆರು ಜನರು ಐದು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಓಂಗೋಲ್‌ನಲ್ಲಿ ನಡೆದಿದೆ.

ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳೆಲ್ಲರನ್ನೂ ರಾಜ್ಯದ ವಿವಿಧ ಭಾಗಗಳಿಂದ ಬಂಧಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂ. 17 ರಂದು ಓಂಗೋಲ್‌ನ ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ತನ್ನ ಸ್ನೇಹಿತೆಗಾಗಿ ಕಾಯುತ್ತಿದ್ದಾಗ ಆರೋಪಿಗಳಲ್ಲಿ ಒಬ್ಬಾತ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಬಳಿಕ ಆತನಿದ್ದ ರೂಂಗೆ ಕರೆದುಕೊಂಡು ಹೋಗಿ ಇತರೆ ಐವರು ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ಎಸಗಿದ್ದಾನೆ.

ನೆರೆಯ ಗುಂಟೂರು ಜಿಲ್ಲೆಯವಳಾದ ಬಾಲಕಿಯು ಆರೋಪಿಗಳ ಕೈಯಿಂದ ತಪ್ಪಿಸಿಕೊಂಡು ಬಂದು ಬಸ್‌ ನಿಲ್ದಾಣ ತಲುಪಿದ್ದಾಳೆ. ಬಳಿಕ ಡ್ಯೂಟಿಯಲ್ಲಿದ್ದ ಹೋಂ ಗಾರ್ಡ್‌ ವೆಂಕಟೇಶ್ವರಾಲು ಮತ್ತು ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಬಾಬು ರಾವ್‌ ಬಾಲಕಿಯನ್ನು ರಕ್ಷಿಸಿದ್ದಾರೆ.

ಸದ್ಯ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ಬಾಲಕಿಯ ದೂರನ್ನು ಆಧರಿಸಿ ಆರೋಪಿಗಳನ್ನು ವಿವಿಧೆಡೆಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *