ಪಿಲಿಪ್ಪೀನ್ಸ್​ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 16 ಸಾವು, 14 ಜನ ಕಣ್ಮರೆ: 81 ಜನರಿಗೆ ಗಾಯ

ಫಿಲಿಪ್ಪೀನ್ಸ್​: ಪಿಲಿಪ್ಪೀನ್ಸ್​ ದೇಶದಲ್ಲಿ ಮಂಗಳವಾರ ನಡೆದ ಎರಡು ಪ್ರಭಲ ಭೂಕಂಪದಲ್ಲಿ 16 ಜನ ಮೃತಪಟ್ಟಿದ್ದಾರೆ. 81 ಜನರು ಗಾಯಗೊಂಡಿದ್ದು, 14 ಜನ ಕಾಣೆಯಾಗಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ನಡೆದ ಮೊದಲ ಭೂಕಂಪನವು ಪಿಲಿಪ್ಪೀನ್ಸ್​ನ ಲುಜಾನ್ ದ್ವೀಪದಲ್ಲಿ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ. ಮಂಗಳವಾರ ಮಧ್ಯಾಹ್ನ ಸಂಭವಿಸಿದ ಕಂಪನವು ಮಧ್ಯ ಪಿಲಿಪ್ಪೀನ್ಸ್​ನ ಸಮಾರ್​ ದ್ವೀಪದಲ್ಲಿ 53.6 ಮೈಲಿಗಳ ಆಳದಲ್ಲಿ ಕೇಂದ್ರಿತವಾಗಿತ್ತು ಎಂದು ಅಮೆರಿಕ ಭೂಗರ್ಭಶಾಸ್ತ್ರ ಇಲಾಖೆ ತಿಳಿಸಿದೆ.

ಮೊದಲ ಕಂಪನದಲ್ಲಿ 29 ಕಟ್ಟಡಗಳು ಹಾನಿಗೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)