15ನೇ ಹಣಕಾಸು; ಗ್ರಾ.ಪಂ.ಗೆ 2241, ತಾ.ಪಂ.ಗೆ 263, ಜಿ.ಪಂ.ಗೆ 131 ಕೋಟಿ ರೂ. ನಿಗದಿ

vidhanasoudha

ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿ 2024-25 ನೇ ಸಾಲಿನ 15 ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆ ತಯಾರಿಸಲು ಮಾರ್ಗಸೂಚಿ ಪ್ರಕಟಿಸಿದೆ.

ಶೇ.60ರ ನಿರ್ಬಂಧಿತ ಅನುದಾನದಲ್ಲಿ ಗ್ರಾಮಾಂತರ ಪ್ರದೇಶದ ನೈರ್ಮಲೀಕರಣ, ಬಯಲು ಬಹಿರ್ದೆಸೆ ಮುಕ್ತ, ಕುಡಿಯುವ ನೀರು ಸರಬರಾಜು, ಮಳೆ ನೀರು ಕೊಯ್ಲು ಮತ್ತು ನೀರು ಮರು ಬಳಕಗೆ ಸಂಬಂಧಿಸಿದಂತಹ ಕೆಲಸ ಕಾರ್ಯಗಳಿಗೆ ಬಳಕೆ ಆದ್ಯತೆ ನೀಡಲು ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಲಾಗಿದೆ.

ಕೇಂದ್ರ ಸರ್ಕಾರದ ಪತ್ರದ ಪ್ರಕಾರ ಶೇ.60ರಷ್ಟು ಅನುದಾನ ನಿರ್ಬಂಧಿತ ಅನುದಾನವಾಗಿದ್ದು, ಅದರಲ್ಲಿ ಶೇ.50ರಷ್ಟು ಅನುದಾನವನ್ನು ಕಡ್ಡಾಯವಾಗಿ ಕುಡಿಯುವ ನೀರು ಮತ್ತು ಶೇ.50ರಷ್ಟು ಅನುದಾನವನ್ನು ಕಡ್ಡಾಯವಾಗಿ ನೈರ್ಮಲ್ಯ, ಕಾಪಾಡಲು ಬಳಸಬೇಕು. ಒಂದು ವೇಳೆ ಯಾವುದಾದರೂ ಗ್ರಾಮ ಪಂಚಾಯಿತಿಯಲ್ಲಿ, ಕುಡಿಯುವ ವೀರು ಆಗಲಿ ಅಥವಾ ನೈರ್ಮಲೀಕರಣ ಚಟುವಟಿಕೆಗಳು ಪೂರ್ಣಗೊಂಡಿದ್ದರೆ ಅಂತಹ ಗ್ರಾಮ ಪಂಚಾಯಿತಿಗಳು ಕೇವಲ ಮತ್ತೊಂದು ಅಂಶಕ್ಕೆ ಮಾತ್ರ ಯೋಜನೆಯನ್ನು ತಯಾರಿಸಿ ಅನುಷ್ಕಾನಗೊಳಿಸಬಹುದು.

ಗ್ರಾಮ ಪಂಚಾಯತಿಗಳಿಗೆ ಲಭ್ಯವಾಗಿರುವ ಅನುದಾನದಲ್ಲಿ ಶೇ.5 ರಷ್ಟು ಅನುದಾನವನ್ನು, ವಿಶೇಷಚೇತನರಿಗೆ ಸಂಬಂಧಿಸಿದ ಕಾಮಗಾರಿಗಳನ್ನು ತೆಗೆದುಕೊಳ್ಳಲು ಮೀಸಲಿರಿಸತಕ್ಕದ್ದು, ವೈಯಕ್ತಿಕ ಸವಲತ್ತುಗಳನ್ನು ನೀೀಡಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಗ್ರಾಪಂಗೆ 2241 ಕೋಟಿ ರೂ. ಮೀಸಲು

2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಕ್ಕೆ 15ನೇ ಹಣಕಾಸು ಆಯೋಗದ ಅನುದಾನದಲ್ಲಿ 2637.00 ಕೋಟಿ ರೂ. ನಿಗದಿಪಡಿಸಲಾಗಿದೆ. ಈ ಅನುದಾನದಲ್ಲಿ ರಾಜ್ಯ ಸರ್ಕಾರ ಶೇ.85 ರಷ್ಟು ಅಂದರೆ 2241.45 ಕೊಟಿ ರೂ.ಗಳ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ, ಶೇ.10 ರಷ್ಟು ಅಂದರೆ 263.70 ಕೋಟಿ ರೂ. ಅನುದಾನವನ್ನು ತಾಲೂಕು ಪಂಚಾಯಿತಿಗಳಿಗೆ, ಶೇ.5 ರಷ್ಟು ಅಂದರೆ 131.85 ಕೋಟಿ ರೂ. ಅನುದಾನವನ್ನು ಜಿಲ್ಲಾ ಪಂಚಾಯಿತಿಗೆ ನಿಗದಿಪಡಿಸಲಾಗಿದೆ.

ಗ್ರಾಮ ಪಂಚಾಯಿತಿಗಳಿಗೆ 15ನೇ ಹಣಕಾಸು ಆಯೋಗದ ನಿರ್ಬಂಧಿತ ಅನುದಾನದಡಿ ನಿಗದಿಪಡಿಸಿರುವ ಅನುದಾನವನ್ನು ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳ ಶೌಚಾಲಯ ನಿರ್ಮಿಸಲು ಬಳಸಬೇಕು. ಸರ್ಕಾರಿ ಆಸ್ಪತ್ರೆಗಳು ಮತ್ತು ಸಾರ್ವಜನಿಕ ವಸತಿ ನಿಲಯಗಳಿಗೆ ಹೆಚ್ಚುವರಿ ಕುಡಿಯುವ ನೀರಿನ ಸರಬರಾಜು ಮತ್ತು ನೈರ್ಮಲೀಕರಣ ವ್ಯವಸ್ಥೆಗೆ ಬಳಸಲು ಮೀಸಲಿರಸಬೇಕು. ಗ್ರಾಪಂ. ವ್ಯಾಪ್ತಿಯಲ್ಲಿ ನಿರ್ವಹಿಸುವ ಚರಂಡಿ ಕಾಮಗಾರಿಗಳನ್ನು ಉದ್ಯೋಗ ಕತ್ರಿ ಯೋಜನೆಯಡಿ ಕೈಗೆತ್ತಿಕೊಳ್ಳಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ.

ಅನಿರ್ಬಂಧಿತ ಅನುದಾನವನ್ನು ಯಾವುದೇ ಕಾರಣಕ್ಕೂ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ವೇತನ ಪಾವತಿಸಲು ಅಥವಾ ಕಚೇರಿ ಇತರೆ ವೆಚ್ಚಕ್ಕಾಗಿ ಬಳಸಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಯಾವುದಕ್ಕೆ ಅನುದಾನ ಬಳಕೆ

-ಗ್ರಾಮ ಪಂಚಾಯತಿಗಳಿಗೆ 15ನೇ ಹಣಕಾಸು ಆಯೋಗದ ಮೂಲ (ಅನಿರ್ಬಂಧಿತ)
ಅನುದಾನದಡಿ ಅಗತ್ಯತೆ ಆಧಾರದ ಮೇಲೆ ವಿದ್ಯುತ್ ಬಿಲ್ಲುಗಳನ್ನು ಕಡಿಮೆ ಮಾಡುವ
ಉದ್ದೇಶದಿಂದ ಅಸಂಪ್ರದಾಯಿಕ ಇಂಧನ ಕಾರ್ಯಕ್ರಮವಾದ ಸೋಲಾರ್ ವಿದ್ಯುತ್‌ನ್ನು
ಅಳವಡಿಸಿಕೊಳ್ಳಬೇಕು.
-ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸಲು ಸಂಬಂಧಿಸಿದ
ಸರ್ಕಾರಿ ಯೋಜನೆಗಳ ಜೊತೆ ಒಗ್ಗೂಡಿಸಬೇಕು.
-ಬಡತನ ನಿರ್ಮೂಲನಾ ಕಾರ್ಯಕ್ರಮಗಳನ್ನು ಮತ್ತು ಸಂಜೀವಿವಿಯ ಜೊತೆ
ಒಗೂಡಿಸಿ ಅನುಷ್ಠಾನ ಮಾಡಬೇಕು.
-ಪ್ರಾಥಮಿಕ ಮತ್ತು ಪೌಢ ಶಿಕ್ಷಣಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯ ಅಭಿವೃದ್ಧಿ
ಪಡಿಸಲು ಕ್ರಮವಹಿಸಬೇಕು.
-ಶಾಲೆಯಿಂದ ಹೊರ ಉಳಿದ ಮಕ್ಕಳ ಗಣತಿ ಕಾರ್ಯ ಮತ್ತು ಅವರನ್ನು ಮತ್ತೆ ಔಪಚಾರಿಕ
ಶಿಕ್ಷಣ ವ್ಯವಸ್ಥೆಯೊಳಗೆ ತರಲು ಕ್ರಮವಹಿಸಬೇಕು.
-ಗ್ರಂಥಾಲಯ ಅಥವಾ ವಾಚನಾಲಯ ನಿರ್ವಹಣೆ ಮಾಡಬೇಕು.
-ಆರೋಗ್ಯ ಇಲಾಖೆಯ ಪಿಹೆಚ್‌ಸಿ, ಸಿಹೆಚ್‌ಸಿ ಮತ್ತು ಉಪಕೇಂದ್ರಗಳಿಗೆ ಅಗತ್ಯ
ಸೌಕರ್ಯ ಒದಗಿಸಬೇಕು.
-ಸಾಂಕ್ರಾಮಿಕ ರೋಗಗಳ ತಡೆಗಾಗಿ ಮತ್ತು ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
-ಮಹಿಳೆಯರು, ಮಕ್ಕಳು ಮತ್ತು ವಿಶೇಷಚೇತನರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಬೇಕು.

Share This Article

7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದ್ರೆ ದೇಹ, ಮನಸ್ಸಿನ ಮೇಲೆ ಪರಿಣಾಮ!  ಸಂಶೋಧನೆಯಿಂದ ಬಹಿರಂಗ.. Sleeping  

Sleeping : ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯ. ನಿದ್ರೆಯ ಕೊರತೆಯು ದೇಹದಲ್ಲಿ ಅನೇಕ ರೋಗಗಳನ್ನು ಉಂಟುಮಾಡುತ್ತದೆ.…

Beauty Tips: ಲಿಪ್‌ಸ್ಟಿಕ್ ಹೆಚ್ಚು ಬಳಸುತ್ತೀರಾ? ಹುಷಾರಾಗಿರಿ.. ಇಲ್ಲಿದೆ ನೋಡಿ ಬೆಚ್ಚಿ ಬೀಳಿಸೋ ವರದಿ

Beauty Tips : ಹುಡುಗಿಯರು ಬಳಸುವ ಸೌಂದರ್ಯವರ್ಧಕಗಳಲ್ಲಿ ಲಿಪ್‌ಸ್ಟಿಕ್ ಕೂಡ ಒಂದು. ತುಟಿಗಳು ಸುಂದರವಾಗಿ ಮತ್ತು…

ಬಿಸಿ ಮಾಡದೆ ಹಾಲನ್ನು ಹಸಿಯಾಗಿ ಕುಡಿಯಲೇಬಾರದು! Raw Milkನಿಂದಾಗುವ ಸಮಸ್ಯೆ ಎದುರಿಸೋಕೆ ರೆಡಿಯಾಗಿ!

Raw Milk : ಗ್ರಾಮೀಣ ಪ್ರದೇಶದ ಜನರು ಹಸು ಅಥವಾ ಎಮ್ಮೆ ಹಾಲನ್ನು ಸೇವಿಸುತ್ತಾರೆ. ಆದರೆ…