Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಕೊಂಬಿನ ಕ್ಯಾನ್ಸರ್​ಗೆ ತುತ್ತಾಗಿದ್ದ ಗೂಳಿ ಹೊಟ್ಟೆಯಲ್ಲಿತ್ತು 15 ಕೆ.ಜಿ. ಪ್ಲಾಸ್ಟಿಕ್, ವೈರ್!

Friday, 07.09.2018, 2:24 PM       No Comments

ಮಂಗಳೂರು: ಪಣಂಬೂರಿನಲ್ಲಿ ಕೊಂಬಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗೂಳಿ ಚಿಕಿತ್ಸೆಗೆ ಗುರುವಾರ ಸಿದ್ಧತೆ ನಡೆಸುತ್ತಿದ್ದಂತೆ ಅದು ಸಾವನ್ನಪ್ಪಿದೆ. ಇದರ ಹೊಟ್ಟೆಯಲ್ಲಿ 15 ಕೆ.ಜಿ.ಗೂ ಮಿಕ್ಕಿ ಪ್ಲಾಸ್ಟಿಕ್, ವಿದ್ಯುತ್ ವೈರ್, ಹಗ್ಗ ತುಂಬಿ ಉಸಿರಾಟದ ತೊಂದರೆ ಕಾಣಿಸಿಕೊಂಡು ಸಾವು ಸಂಭವಿಸಿದೆ.
ಗುರುವಾರ ಮುಂಜಾನೆ ಗನ್ ಮೂಲಕ ಅನಸ್ತೇಶಿಯಾ ಚುಚ್ಚಿ ಗೂಳಿಯನ್ನು ಸೆರೆಹಿಡಿಯಲಾಗಿತ್ತು. ತಕ್ಷಣ ಪಜೀರು ಗೋವನಿತಾಶ್ರಯಕ್ಕೆ ಸಾಗಿಸಿ ಶಸ್ತ್ರಚಿಕಿತ್ಸೆಗೆಂದು ವಿವಿಧ ತಪಾಸಣೆ ನಡೆಸಲಾಗುತ್ತಿತ್ತು. ಈ ನಡುವೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು ಸಾವನ್ನಪ್ಪಿದೆ.
ಉನ್ನತ ತನಿಖೆಗಾಗಿ ಮರಣೋತ್ತರ ತಪಾಸಣೆ ನಡೆಸಿದಾಗ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತುಂಬಿರುವುದು ಪತ್ತೆಯಾಗಿದೆ. ಗೂಳಿ ಕಾಣಲು ದಷ್ಟಪುಷ್ಟವಾಗಿದ್ದರೂ ಆಹಾರ ತಿನ್ನಲು ಸಾಧ್ಯವಾಗದೆ ಬಳಲಿ ರಕ್ತಹೀನವಾಗಿತ್ತು. ಶ್ವಾಸಕೋಶದಲ್ಲಿ ಕಾರ್ಬನ್ ಅಂಶ ಕಂಡುಬಂದಿದೆ. ಬಹು ಅಂಗಾಂಗಗಳು ವಿಫಲವಾಗಿದ್ದವು. ಪಣಂಬೂರು ಕಾರ್ಖನೆ ಪ್ರದೇಶದಲ್ಲೇ ಅಡ್ಡಾಡುತ್ತಿದ್ದರಿಂದ ಆಹಾರ ಮತ್ತು ಉಸಿರಾಟದ ಮೂಲಕ ದೇಹಕ್ಕೆ ಹೆಚ್ಚಿನ ಕಾರ್ಬನ್ ಅಂಶ ಸೇರಿಕೊಂಡಿರಬೇಕು. ಮನುಷ್ಯನ ಅಸಡ್ಡೆಯಿಂದಾಗಿ ಪ್ಲಾಸ್ಟಿಕ್ ಹೊಟ್ಟೆ ಸೇರಿದೆ. ಹೀಗಾಗಿ ದೇಹದಲ್ಲಿ ವಿಷಕಾರಿ ಅಂಶಗಳು ಸಂಗ್ರಹಗೊಂಡಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರು ವಿಜಯವಾಣಿಗೆ ತಿಳಿಸಿದ್ದಾರೆ.
ಪಣಂಬೂರಿನಿಂದ ಕೂಳೂರಿನ ತನಕ ಅಡ್ಡಾಡುತ್ತಿದ್ದ ಗೂಳಿಯ ಕೊಂಬಿನಲ್ಲಿ ಕಳೆದ ಒಂದು ವರ್ಷಗಳ ಹಿಂದೆ ಸಣ್ಣ ಗಾಯ ಕಾಣಿಸಿಕೊಂಡು ದೊಡ್ಡದಾಗಿ ಕ್ಯಾನ್ಸರ್ ಆಗಿ ಮಾರ್ಪಟ್ಟಿತ್ತು. ಜನರ ಒತ್ತಾಯದ ಹಿನ್ನೆಲೆಯಲ್ಲಿ ಪಶುಸಂಗೋಪನಾ ಇಲಾಖೆ ಕಳೆದೆರಡು ದಿನಗಳಿಂದ ಕಾರ್ಯಾಚರಣೆ ನಡೆಸಿ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸಿತ್ತು.
ಗೂಳಿಯ ಚಿಕಿತ್ಸೆ ತಂಡದಲ್ಲಿ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಮೋಹನ್, ಪಶುವೈದ್ಯಾಧಿಕಾರಿಗಳಾದ ಡಾ.ಅಶೋಕ್ ಕೆ.ಆರ್., ಡಾ.ಮಹೇಶ್, ಡಾ.ವಸಂತ ಕುಮಾರ್ ಶೆಟ್ಟಿ, ಡಾ.ಯಶಸ್ವಿನಿ, ಡಾ.ವಿಶ್ವಾರಾದ್ಯ ಇದ್ದರು.

ಸಾಕುಪ್ರಾಣಿಗಳನ್ನು ಕಟ್ಟಿಹಾಕಿ ಸಾಕಬೇಕು. ಮನುಷ್ಯ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿಸಾಡಿ ದನಗಳ ಸಾವಿಗೆ ಕಾರಣನಾಗುತ್ತಿದ್ದಾನೆ. ಈ ಬಗ್ಗೆ ಸ್ವಯಂ ಜಾಗೃತಿ ಮೂಡಿಸಿಕೊಳ್ಳಬೇಕಿದೆ. ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು.
|ಡಾ.ಮೋಹನ್, ಉಪನಿರ್ದೇಶಕರು ಪಶುಸಂಗೋಪನೆ ಇಲಾಖೆ

ಬೇಕಾಬಿಟ್ಟಿಯಾಗಿ ಪ್ಲಾಸ್ಟಿಕ್ ಎಸೆಯುತ್ತಿರುವುದು ಅನೇಕ ಪ್ರಾಣಿಗಳ ಜೀವಕ್ಕೆ ಎರವಾಗುತ್ತಿದೆ, ಈ ರೀತಿ ಎಸೆಯಲಾದ ಪ್ಲಾಸ್ಟಿಕ್ ಹಾನಿಕರ ಎನ್ನುವುದನ್ನು ಅರಿಯದೆ ಮೂಕಪ್ರಾಣಿಗಳು ತಿಂದು ನಿಧಾನವಾಗಿ ಜೀವ ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಇದನ್ನು ಗಮನಿಸುತ್ತಿಲ್ಲವೇ ?
|ಶಶಿಧರ ಶೆಟ್ಟಿ, ಎನ್‌ಇಸಿಎಫ್

Leave a Reply

Your email address will not be published. Required fields are marked *

Back To Top