150 ಕೋಟಿ ರೂ.ವರ್ಗಾವಣೆಗೆ ವಿವಾದಕ್ಕೆ ಸಿಲುಕಿದ ಬೆಂ.ನಗರ ವಿವಿ

ಬೆಂಗಳೂರು: ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ 150 ಕೋಟಿ ರೂ.ಗಳನ್ನು ಸರ್ಕಾರದ ಖಾತೆ ವರ್ಗಾವಣೆ ಮಾಡಲು ಮುಂದಾಗಿರುವ ಬೆಂಗಳೂರು ನಗರ ವಿಶ್ವವಿದ್ಯಾಲಯ(ಬಿಸಿಯು) ವಿವಾದಕ್ಕೆ ಸಿಲುಕಿದೆ. ಈ ಬಾರಿ ಮೊತ್ತವನ್ನು ಯಾವುದೇ ಸಿಂಡಿಕೇಟ್ ಸದಸ್ಯರ ಗಮನೆ ತಾರದೇ ಏಕಾಏಕಿ ವರ್ಗಾವಣೆ ಮಾಡಲು ವಿವಿಯ ಕುಲಪತಿ ನಿರ್ಧರಿಸಿರುವುದು ಸಿಂಡಿಕೇಟ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಕುಲಪತಿ ಎಸ್. ಜಾಫಟ್ ನಿವೃತ್ತಿಗೆ ಒಂದು ವಾರ ಇರುವಾಗ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬಾರದು ಎಂಬ ನಿಯಮದ ನಡುವೆಯೂ ತರಾತುರಿಯಲ್ಲಿ ಹಣ ವರ್ಗಾವಣೆ ಮಾಡುತ್ತಿರುವುದು ಅನುಮಾನಗಳಿಗೂ ಕಾರಣವಾಗಿದೆ.

ಬೆಂ.ನಗರ ವಿವಿ ಪ್ರಸನ್ನ ಕುಮಾರ ಬ್ಲಾಕ್ ಆವರಣದಲ್ಲಿ 43 ಎಕರೆ ಜಮೀನಿನಲ್ಲಿ ವಿವಿಗೆ ಅಗತ್ಯವಾದ ಮೂಲಭೂತ ಸೌಕರ್ಯ ಕಟ್ಟಡಗಳ ನಿರ್ಮಾಣ ಹಾಗೂ ಹಾಲಿ ಕಟ್ಟಡಗಳ ದುರಸ್ತಿ, ನವೀಕರಣಕ್ಕಾಗಿ ಯೋಜನೆ ರೂಪಿಸಲು ವಿವಿಯಲ್ಲಿ ಪ್ರತ್ಯೇಕ ಇಂಜಿನಿಯರಿಂಗ್ ವಿಭಾಗ ಇಲ್ಲದೇ ಇರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿಂಗ್ ಘಟಕಕ್ಕೆ ಯೋಜನೆ ರೂಪಿಸಿ, ನಿರ್ಮಾಣಕ್ಕೆ ಕೋರಿದೆ. ಈ ಇಲಾಖೆಯು 150 ಕೋಟಿ ರೂ.ಗಳನ್ನು ಅಂದಾಜು ವೆಚ್ಚದ ಪ್ಲಾನ್ ನೀಡಿದೆ.

ವಿವಿಯಲ್ಲಿ ಲಭ್ಯವಿರುವ ಸಂಪನ್ಮೂಲದ ಹಣ 90 ಕೋಟಿ ರೂ ಠೇವಣಿಯಾಗಿಟ್ಟು, ಉಳಿದ 60 ಕೋಟಿ ರೂ.ಗಳನ್ನು ಹಂತ ಹಂತವಾಗಿ ವಿತರಿಸಲು ನಿರ್ಧರಿಸಿದೆ. ಈ ಯೋಜನಾ ನಕ್ಷೆ ತಯಾರಿಸಿ 90 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲು ಆಡಳಿತಾತ್ಮಕ ಅನುಮತಿ ನೀಡಬೇಕೆಂದು ವಿವಿಯ ಕುಲಪತಿ ವಿವಿಯು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಸಭೆ ಚರ್ಚೆ ಇಲ್ಲ: ವಿವಿಯು ಯಾವುದೇ ಆಡಳಿತಾತ್ಮಕ ವಿಚಾರಗಳ ಬಗ್ಗೆ ನಿರ್ಧಾರ ತೆಗದುಕೊಳ್ಳುವ ಮುನ್ನ ಆ ವಿಷಯವನ್ನು ಸಿಂಡಿಕೇಟ್ ಸಭೆಯಲ್ಲಿಟ್ಟು ಚರ್ಚಿಸಿ ಅನುಮೋದನೆ ಪಡೆದ ನಂತರವೇ ಸರ್ಕಾರಕ್ಕೆ ಕಳುಹಿಸಬೇಕಿದೆ. ವಿವಿಯಲ್ಲಿ ಸಿಂಡಿಕೇಟ್ ನಿರ್ಧಾರವೇ ಅಂತಿಮವಾಗಿರುತ್ತದೆ. ಆದರೆ, ವಿವಿಯು ಈ ಬಾರಿ ಮೊತ್ತದ ವಿಚಾರವನ್ನು ಸದಸ್ಯರ ಗಮನಕ್ಕೆ ತಂದಿಲ್ಲ. ಸಭೆಯಲ್ಲೂ ಚರ್ಚಿಸಿಲ್ಲ. ಏಕಾಏಕಿ ವಿದ್ಯಾರ್ಥಿಗಳ ಹಣವನ್ನು ಸರ್ಕಾರಕ್ಕೆ ನೀಡುವ ಅನಿವಾರ್ಹತೆ ಏನಿದೆ? ಎಂದು ಸಿಂಡಿಕೇಟ್ ಸದಸ್ಯರು ಪ್ರಶ್ನಿಸಿದ್ದಾರೆ.

ನಿವೃತ್ತಿ ಅಂಚು: ಬೆಂ.ನಗರ ವಿವಿಯ ಕುಲಪತಿ ಡಾ.ಎಸ್.ಜಾಫಟ್ ಅವರು ನ.20ರಂದು ನಿವೃತ್ತಿಯಾಗುತ್ತಿದ್ದಾರೆ. ನಿವೃತ್ತಿಗೆ ಒಂದು ವಾರ ಬಾಕಿ ಉಳಿದಿರುವಾಗ ಈ ಬಾರಿ ಮೊತ್ತವನ್ನು ವಿವಿಯಿಂದ ಆರೋಗ್ಯ ಇಲಾಖೆಗೆ ವರ್ಗಾವಣೆ ಮಾಡಲು ಆತುರವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ನಿವೃತ್ತಿಗೆ 6 ತಿಂಗಳು ಇರುವಾಗ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬ ನಿಯಮವಿದ್ದರೂ ಇದನ್ನು ಗಾಳಿಗೆ ತೂರಿ ಅನುದಾನ ವರ್ಗಾವಣೆಗೆ ಮುಂದಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…