ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತಾನು ರಚಿಸಿರುವ ವಿವಿಧ ಬಡಾವಣೆಗಳಲ್ಲಿನ 150 ಮೂಲೆ ನಿವೇಶನಗಳನ್ನು ಇ-ಹರಾಜು ಮೂಲಕ ವಿಲೇವಾರಿ ಮಾಡಲು ತೀರ್ಮಾನಿಸಿದೆ.
ಬನಶಂಕರಿ 6ನೇ ಹಂತ, ವಿಶ್ವೇಶ್ವರಯ್ಯ ಬಡಾವಣೆಯ 4ನೇ ಬ್ಲಾಕ್, ಅಂಜನಾಪುರ 10ನೇ ಬ್ಲಾಕ್, ಅಂಜನಾಪುರ ಟೌನ್‌ಶಿಪ್ 6ನೇ ಬ್ಲಾಕ್, ಚಂದ್ರಾ ಲೇಔಟ್, ಎಚ್‌ಎಸ್‌ಆರ್ 3ನೇ ಸೆಕ್ಟರ್, ಕುಮಾರಸ್ವಾಮಿ ಬಡಾವಣೆಯ 1ನೇ ಹಂತ ಸೇರಿ ಹಲವು ಬಡಾವಣೆಗಳಲ್ಲಿನ ಕಾರ್ನರ್ ಸೈಟ್‌ಗಳನ್ನು ಸಾರ್ವಜನಿಕವಾಗಿ ಹರಾಜು ಮಾಡಲಾಗುತ್ತಿದೆ.
1ರಿಂದ 50 ಸಂಖ್ಯೆಯ ಕಾರ್ನರ್ ಸೈಟ್‌ಗಳಿಗೆ ಫೆ.17ರ ಬೆಳಗ್ಗೆ 10ರಿಂದ ನೇರ ಬಿಡ್ಡಿಂಗ್ ಆರಂಭಿಸಲಿದ್ದು, ಮರುದಿನ ಸಂಜೆ 5ಕ್ಕೆ ಕೊನೆಗೊಳ್ಳುತ್ತದೆ. 51ರಿಂದ 100ರವರೆಗಿನ ಸೈಟ್‌ಗಳಿಗೆ ಫೆ.18ರಂದು ಬಿಡ್ಡಿಂಗ್ ಆರಂಭಗೊಂಡು ಮರುದಿನ ಸಂಜೆ ಗುಡುವು ಮುಗಿಯಲಿದೆ. 101ರಿಂದ 150ರವರೆಗಿನ ನಿವೇಶನಗಳಿಗೆ ಫೆ.19ರಂದು ಬಿಡ್ಡಿಂಗ್ ಆರಂಭಗೊಳ್ಳಲಿದ್ದು, ಮರುದಿನ ಸಂಜೆ 5ಕ್ಕೆ ಬಿಡ್ಡಿಂಗ್ ಅಂತಿಮಗೊಳ್ಳಲಿದೆ. ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯಬಹುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.