ದ.ಕ. 15 ನಾಮಪತ್ರ ಸಲ್ಲಿಕೆ

ಮಂಗಳೂರು: ದ.ಕ. ಲೋಕಸಭಾ ಕ್ಷೇತ್ರದಿಂದ ಒಟ್ಟು 15 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಮಂಗಳವಾರ ಒಟ್ಟು 12 ಸೆಟ್ ನಾಮಪತ್ರ ಸಲ್ಲಿಕೆಯಾಗಿದೆ.
ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ತಲಾ 4 ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಡಮ್ಮಿ ಅಭ್ಯರ್ಥಿಯಾಗಿ ಸುದರ್ಶನ್ 2 ಸೆಟ್ ನಾಮಪತ್ರ ಸಲ್ಲಿಸಿದ್ದು, 15 ಮಂದಿಯಿಂದ ಒಟ್ಟು 24 ನಾಮಪತ್ರ ಸಲ್ಲಿಕೆಯಾಗಿದೆ.
ನಾಮಪತ್ರ ಸಲ್ಲಿಸಿದವರ ವಿವರ: ನಳಿನ್‌ಕುಮಾರ್ ಕಟೀಲ್, ಸುದರ್ಶನ (ಬಿಜೆಪಿ), ಮಿಥುನ್ ರೈ(ಕಾಂಗ್ರೆಸ್), ಮಹಮ್ಮದ್ ಇಲಿಯಾಸ್, ಇಸ್ಮಾಯಿಲ್ ಶಾಫಿ .ಕೆ.(ಎಸ್‌ಡಿಪಿಐ), ಸತೀಶ್ ಸಾಲ್ಯಾನ್(ಬಿಎಸ್‌ಪಿ), ಸುಪ್ರೀತ್ ಕುಮಾರ್ ಪೂಜಾರಿ(ಹಿಂದುಸ್ಥಾನ ಜನತಾ ಪಾರ್ಟಿ), ವಿಜಯ ಶ್ರೀನಿವಾಸ ಸಿ.(ಉತ್ತಮ ಪ್ರಜಾಕೀಯ ಪಾರ್ಟಿ), ಮಹಮ್ಮದ್ ಖಾಲಿದ್, ಅಬ್ದುಲ್ ಹಮೀದ್, ಡಾ.ದೀಪಕ್ ರಾಜೇಶ್ ಕುವೆಲ್ಲೊ , ಸುರೇಶ್ ಪೂಜಾರಿ ಎಚ್, ಮ್ಯಾಕ್ಸಿಂ ಪಿಂಟೊ, ವೆಂಕಟೇಶ್ ಬೆಂಡೆ, ಡೊಮಿನಿಕ್ ಅಲೆಗ್ಸಾಂಡರ್ ಡಿಸೋಜ ( ಪಕ್ಷೇತರರು).
ಮಾ.27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮಾ.29 ನಾಮಪತ್ರ ಹಿಂದೆಗೆದುಕೊಳ್ಳಲು ಕೊನೇ ದಿನವಾಗಿರುತ್ತದೆ.