15 ಸರ್ಕಾರಿ ಪ. ಪೂರ್ವ ಕಾಲೇಜಿನಲ್ಲಿ ಶೇ.100 ಫಲಿತಾಂಶ: 3ರಲ್ಲಿ ಮಾತ್ರ ಶೂನ್ಯ ರಿಸಲ್ಟ್​

ಬೆಂಗಳೂರು: ರಾಜ್ಯದ 15 ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶೇ.100 ಫಲಿತಾಂಶ ಲಭ್ಯವಾಗಿದೆ. 3 ಕಾಲೇಜುಗಳಲ್ಲಿ ಮಾತ್ರ ಶೂನ್ಯ ಫಲಿತಾಂಶ ದೊರೆತಿದೆ.

ಅನುದಾನಿತ ಪದವಿ ಪೂರ್ವ ಕಾಲೇಜುಗಳ ಪೈಕಿ 1 ಕಾಲೇಜಿನಲ್ಲಿ ಶೇ. 100 ಮತ್ತು 1 ರಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಪೈಕಿ 63 ಕಾಲೇಜುಗಳಲ್ಲಿ ಶೇ. 100 ಫಲಿತಾಂಶ ಬಂದಿದ್ದರೆ, 94 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ವಿಭಜಿತ ಪದವಿ ಪೂರ್ವ ಕಾಲೇಜುಗಳ ಪೈಕಿ 1 ಕಾಲೇಜಿಗೆ ಶೇ.100 ಫಲಿತಾಂಶ ದೊರೆತಿದ್ದರೆ, ಯಾವುದೇ ಕಾಲೇಜು ಶೂನ್ಯ ಫಲಿತಾಂಶ ದಾಖಲಿಸಿಲ್ಲ.

ಪ್ರತಿ ವಿಷಯದ ಮರುಮೌಲ್ಯಮಾಪನಕ್ಕೆ 1,670 ರೂ. ಶುಲ್ಕ ನಿಗದಿ
ಫಲಿತಾಂಶದ ಬಗ್ಗೆ ಅಸಮಾಧಾನವಿದ್ದರೆ ಉತ್ತರ ಪತ್ರಿಕೆಯ ಸ್ಕ್ಯಾನಿಂಗ್​ ಪ್ರತಿ ಪಡೆದುಕೊಂಡು, ಮರುಮೌಲ್ಯಮಾಪನಕ್ಕೆ ಮನವಿ ಸಲ್ಲಿಸಬಹುದಾಗಿದೆ. ಬುಧವಾರದಿಂದ (ಏ.17) ಉತ್ತರ ಪತ್ರಿಕೆಯ ಸ್ಕ್ಯಾನಿಂಗ್​ ಪ್ರತಿಗಳನ್ನು ನೀಡಲಾಗುವುದು. ಸ್ಕ್ಯಾನಿಂಗ್​ ಪ್ರತಿಗೆ ಅರ್ಜಿ ಸಲ್ಲಿಸಲು ಏ.29 ಕೊನೇ ದಿನವಾಗಿರುತ್ತದೆ. ಏ.27ರಿಂದ ಉತ್ತರ ಪತ್ರಿಕೆಯ ಸ್ಕ್ಯಾನಿಂಗ್​ ಪ್ರತಿಗಳನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದ್ದು, ಮೇ ಕೊನೇ ದಿನವಾಗಿರುತ್ತದೆ.

ಮರುಮೌಲ್ಯಮಾಪನಕ್ಕೆ ಅರ್ಜಿಸಲ್ಲಿಸಲು ಹಾಗೂ ಮರುಎಣಿಕೆಗಾಗಿ ಏ.29ರಿಂದ ಮೇ 8ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಸ್ಕ್ಯಾನಿಂಗ್​ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಹಾಗೂ ಮರುಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1,670 ರೂ. ಶುಲ್ಕ ನಿಗದಿಯಾಗಿದೆ.