VIDEO|ನದಿ ನೀರಿನ ರಭಸಕ್ಕೆ ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ದನಕರುಗಳು

ಮುಂಬೈ: ರಾಜ್ಯದ ಚಂದ್ರಾಪುರ ಜಿಲ್ಲೆಯ ಧಾಬಾ ಗ್ರಾಮದ ಬಳಿ ನದಿ ನೀರಿನ ರಭಸಕ್ಕೆ 15 ಗೋವುಗಳು ಮಾಲೀಕನ ಮುಂದೆಯೆ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

ಗ್ರಾಮದ ಬಳಿ ಸೇತುವೆ ದಾಟಲು ಹೋದ ದನಕರುಗಳು ನೀರಿನ ರಭಸಕ್ಕೆ ಮೇಲಿಂದ ಕೆಳಗೆ ಬೀಳುವ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಕರುಗಳು ಒಂದೊಂದಾಗಿ ನೀರಿಗೆ ಬಿದ್ದು ಒದ್ದಾಡುತ್ತಿರುವ ದೃಶ್ಯ ನೋಡುಗರ ಮನಕಲಕುವಂತಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು ಎಲ್ಲ ನದಿಗಳು ತುಂಬಿ ಹರಿಯುತ್ತಿವೆ. (ದಿಗ್ವಿಜಯ ನ್ಯೂಸ್​)

VIDEO | ನದಿ ನೀರಿನ ರಭಸಕ್ಕೆ ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ದನಕರುಗಳು

#HeavyRain #RiverWater #Maharashtra #Cattle

Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜುಲೈ 30, 2019

Leave a Reply

Your email address will not be published. Required fields are marked *