More

    ಗೋಕಾಕ: 14 ಪಿಯು ಕಾಲೇಜು ಆರಂಭಕ್ಕೆ ಪ್ರಸ್ತಾವನೆ

    ಗೋಕಾಕ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಮೂಡಲಗಿ ವಲಯಕ್ಕೆ 14 ಪದವಿ ಪೂರ್ವ ಮಹಾವಿದ್ಯಾಲಯಗಳು ಅವಶ್ಯ. ಶೀಘ್ರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸುವೆ. ಮುಖ್ಯಮಂತ್ರಿಗಳು ಸಮ್ಮತಿ ನೀಡಿದ್ದಾದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

    ನಗರದ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಭಾನುವಾರ ಶ್ರೀಮತಿ ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ಮೂಡಲಗಿ ವಲಯದ ಅತಿಥಿ ಶಿಕ್ಷಕರಿಗೆ 13.50 ಲಕ್ಷ ರೂ. ಗೌರವಧನ ವಿತರಿಸಿ ಮಾತನಾಡಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ, ವಲಯದ ಅತಿಥಿ ಶಿಕ್ಷಕರಿಗೆ ಪ್ರತಿವರ್ಷ ಗೌರವಧನ ಕೊಡುತ್ತಿದ್ದಾರೆ. ತಾಯಿ-ತಂದೆಯವರ ಸ್ಮರಣಾರ್ಥ ಮನ್ನಿಕೇರಿಯಲ್ಲಿ ಸರ್ಕಾರಿ ಪ್ರೌಢ ಶಾಲೆಗೆ 4 ಎಕರೆ ಜಮೀನು ನೀಡಿದ್ದಾರೆ. ರಾಜ್ಯದಲ್ಲಿಯೇ ಅತೀ ಹೆಚ್ಚು ವಸತಿ ಶಾಲೆಗಳನ್ನು ಆರಂಭಿಸುವಲ್ಲಿ ಶಾಸಕರ ಪಾತ್ರ ದೊಡ್ಡದು ಎಂದರು. ಅತಿಥಿ ಶಿಕ್ಷಕರಿಗೆ 13.50 ಲಕ್ಷ ರೂ. ವಿತರಣೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ 367 ಶಿಕ್ಷಕರಿಗೆ ಟ್ರಸ್ಟ್ ಮೂಲಕ 13.50 ಲಕ್ಷ ರೂ. ಗೌರವಧನವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ವಿತರಿಸಿದರು.

    ಇದೇ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು 10ನೇ ವರ್ಗದ ವಿದ್ಯಾರ್ಥಿಗಳಿಗಾಗಿ ಕಾವ್ಯ ಪ್ರಕಾಶನ ಹೊರತಂದಿರುವ ಗೆಲುವಿನ ದೀವಿಗೆ ಅಭ್ಯಾಸ ಕೈಪಿಡಿ ಮತ್ತು 10ನೇ ತರಗತಿಯ 6135 ಮಕ್ಕಳಿಗೆ ವಿಶೇಷ ಸರಣಿ ಪರೀಕ್ಷೆಗಾಗಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಉಚಿತವಾಗಿ ನೀಡಿದರು.

    ಶಕುಂತಲಾ ಪರುಶೆಟ್ಟಿ, ಡಾ.ರಾಜೇಂದ್ರ ಸಣ್ಣಕ್ಕಿ, ಅಶೋಕ ನಾಯಿಕ, ಅಜ್ಜಪ್ಪ ಗಿರಡ್ಡಿ, ಅಶೋಕ ಖಂಡ್ರಟ್ಟಿ, ಮಲ್ಲಪ್ಪ ಪಾಟೀಲ ಉಪಸ್ಥಿತರಿದ್ದರು. ಬಾಲಚಂದ್ರ ಜಾರಕಿಹೊಳಿ ಅವರನ್ನು ಮೂಡಲಗಿ ವಲಯದ ಸಿಆರ್‌ಪಿಗಳು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘ, ಅತಿಥಿ ಶಿಕ್ಷಕರ ಸಂಘದಿಂದ ಸತ್ಕರಿಸಲಾಯಿತು. ಸ್ವಾಮಿ ವಿವೇಕಾನಂದ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

    ಒಗ್ಗಟ್ಟಿನಿಂದ ಜಾತ್ರೆ ಆಚರಣೆ ಮಾದರಿ

    ಮೂಡಲಗಿ: ಭಂಡಾರದಿಂದ ಕೂಡಿರುವ ಜೋಕಾನಟ್ಟಿ ಗ್ರಾಮದೇವರ ಜಾತ್ರೆ ಪ್ರತಿವರ್ಷ ಹೆಚ್ಚು ಭಕ್ತರನ್ನು ಆಕರ್ಷಿಸುತ್ತಿದ್ದು, ದೊಡ್ಡ ಜಾತ್ರೆಯಾಗಿ ಹೊರಹೊಮ್ಮುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಸಮೀಪದ ಜೋಕಾನಟ್ಟಿ ಗ್ರಾಮದಲ್ಲಿ ಈಚೆಗೆ ಗ್ರಾಮದೇವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು. ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು. ಸಿದ್ಲಿಂಗಪ್ಪ ಕಂಬಳಿ, ಕೃಷ್ಣಪ್ಪ ಬಂಡ್ರೊಳ್ಳಿ, ಭೀಮಶಿ ಮೋಕಾಶಿ, ಕುಬೇಂದ್ರ ತೆಗ್ಗಿ, ಪರಸಪ್ಪ ಬಬಲಿ, ನಾರಾಯಣ ಸನದಿ, ಅಮೃತ ದಪ್ಪಿನವರ, ಚಂದ್ರು ಬಿದರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts