More

  14ರಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ

  ಚಿತ್ರದುರ್ಗ: ನಗರ ಕೇಂದ್ರ ಗ್ರಂಥಾಲಯದಲ್ಲಿ ನ.14 ರಿಂದ 20 ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಆಚರಿಸಲಾ ಗುತ್ತಿದೆ. ಇದರ ಅಂಗವಾಗಿ ನ.8ರಂದು ನಗರ ವ್ಯಾಪ್ತಿಯ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಗ್ರಂಥಾಲಯದಲ್ಲಿ ಆಯೋಜಿಸಲಾಗಿದೆ. ಪ್ರತಿ ಶಾಲಾ ಹಾಗೂ ಕಾಲೇಜುಗಳಿಂದ ತಲಾ ಇಬ್ಬರು ವಿದ್ಯಾರ್ಥಿಗಳು 7 ರೊಳಗೆ ನಗರ ಕೇಂದ್ರ ಗ್ರಂಥಾಲಯ ಕಚೇರಿಯಲ್ಲಿ ನೋಂದಾಯಿಸಬಹುದು.
  8 ರಂದು ಬೆಳಗ್ಗೆ 11ರಿಂದ 12ರವರೆಗೆ‘ನಮ್ಮ ಪರಿಸರ’ಕುರಿತು ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಯನ್ನು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ, ಮಧ್ಯಾಹ್ನ 3ರಿಂದ 4 ರವರಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಸಾರ್ವಜನಿಕ ಗ್ರಂಥಾಲಯದ ಮಹತ್ವ’ಕುರಿತಂತೆ ಹಾಗೂ ಸಂಜೆ 4 ರಿಂದ 5ರವರೆಗೆ ಪಿಯು ವಿದ್ಯಾರ್ಥಿಗಳಿಗೆ ‘ನಮ್ಮ ತರಾಸು’ಜೀವನ ಚರಿತ್ರೆ ಕುರಿ ತಂತೆ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಎಲ್ಲ ಸ್ಪರ್ಧೆಗಳಿಗೆ 1 ಗಂಟೆ ಅವಧಿ ಇರುತ್ತದೆ ಎಂದು ನಗರ ಕೇಂದ್ರ ಗ್ರಂಥಾಲಯ ದ ಮುಖ್ಯಗ್ರಂಥಾಲಯಾಧಿಕಾರಿ ಬಸವರಾಜಕೊಳ್ಳಿ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts