13 ಪದಕ ಬೇಟೆಯಾಡಿದ ದಂಗಲ್ ಕಲಿಗಳು

ಹಳಿಯಾಳ: ದಂಗಲ್ ನಾಡು ಎಂದೇ ಹೆಸರಾದ ಹಳಿಯಾಳ ತಾಲೂಕಿನ ಕುಸ್ತಿ ಪಟುಗಳು ಶ್ರೇಷ್ಠ ಸಾಧನೆಗೈದಿದ್ದು ಕನಕಪುರದಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 8 ಬಂಗಾರ, 1 ಬೆಳ್ಳಿ ಹಾಗೂ 4 ಕಂಚಿನ ಪದಕ ಗೆಲ್ಲುವ ಮೂಲಕ ಕುಸ್ತಿಯಲ್ಲಿ ಹಳಿಯಾಳದ ಗರಿಮೆ ಹೆಚ್ಚಿಸಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರದಲ್ಲಿ ನ. 23ರಿಂದ 25ರವರೆಗೆ ನಡೆದ 2018-19ನೇ ಸಾಲಿನ 14 ಮತ್ತು 17 ವರ್ಷದೊಳಗಿನ ಶಾಲಾ ಬಾಲಕ, ಬಾಲಕಿಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹಳಿಯಾಳದ ಕುಸ್ತಿ ವಸತಿ ನಿಲಯದ 9 ಬಾಲಕರು ಹಾಗೂ 5 ಬಾಲಕಿಯರು ಸೇರಿ ಒಟ್ಟು 14 ಕುಸ್ತಿ ಪಟುಗಳ ತಂಡ ಭಾಗವಹಿಸಿ ರಾಜ್ಯ ಗಮನ ಸೆಳೆಯುವ ಸಾಧನೆಯನ್ನು ಮಾಡಿದ್ದಾರೆ.

ಬಾಲಕಿಯರ ತಂಡವು 4 ಬಂಗಾರ ಹಾಗೂ 1 ಬೆಳ್ಳಿ ಪಡೆದರೆ, ಬಾಲಕರ ತಂಡವು 4 ಬಂಗಾರ, 4 ಕಂಚಿನ ಪದಕ ಪಡೆದಿದೆ. ಈ ಕುಸ್ತಿ ಪಟುಗಳು ಕುಸ್ತಿ ವಸತಿ ನಿಲಯದ ಕೋಚ್ ಕಾಡೇಶ ನ್ಯಾಮಗೌಡ ಹಾಗೂ ತರಬೇತುದಾರ ಬಾಳಕೃಷ್ಣ ದಡ್ಡಿಯವರ ಬಳಿ ತರಬೇತಿ ಪಡೆದಿದ್ದಾರೆ.

14 ವರ್ಷದೊಳಗೆ: (ಬಾಲಕರು): ಶಾಹೀದ ದೇವಕಾರಿ (35ಕೆ.ಜಿ. ವಿಭಾಗ) ತೃತೀಯ ಸ್ಥಾನ ಕಂಚಿನ ಪದಕ, ಶುಭಂ ಯಲ್ಲಪ್ಪ ಮಾಲವಣಕರ (44ಕೆ.ಜಿ. ವಿಭಾಗ) ತೃತೀಯ ಸ್ಥಾನ ಕಂಚಿನ ಪದಕ.

17 ವರ್ಷದೊಳಗೆ (ಬಾಲಕಿಯರು): ಕಾವ್ಯಾ ಘಟಗೋಳಕರ: 40 ಕೆ.ಜಿ. ವಿಭಾಗ-ಚಿನ್ನದ ಪದಕ, ರೂಪಾ ಕೊಲೆಕರ, 43 ಕೆ.ಜಿ. ವಿಭಾಗ-ಚಿನ್ನದ ಪದಕ, ನಿಖಿತಾ ಡೇಪಿ, 46 ಕೆ.ಜಿ. ವಿಭಾಗ-ಚಿನ್ನದ ಪದಕ, ಸುಜಾತಾ ಪಾಟೀಲ, 57 ಕೆ.ಜಿ ವಿಭಾಗ ಚಿನ್ನದ ಪದಕ, ರಕ್ಷಿತಾ ಸೂರ್ಯವಂಶಿ 49 ಕೆ.ಜಿ. ವಿಭಾಗ- ಬೆಳ್ಳಿ ಪದಕ ಪಡೆದಿದ್ದಾರೆ.

17 ವರ್ಷದೊಳಗೆ:(ಬಾಲಕರು): ಸುಲೇಮಾನ ದೇವಕಾರಿ, 45ಕೆ.ಜಿ. ವಿಭಾಗ-ಗ್ರೀಕೋ ರೋಮನ್-ಚಿನ್ನದ ಪದಕ, ಕೃಷ್ಣ ಯಮನಪ್ಪನವರ- 51ಕೆ.ಜಿ. ವಿಭಾಗ ಗ್ರೀಕೋ ರೋಮನ್- ಚಿನ್ನದ ಪದಕ, ಶೈಲೇಶ ಸುತಾರ-48 ಕೆ.ಜಿ. ವಿಭಾಗ ಪ್ರಿಸ್ಟೈಲ್- ಚಿನ್ನದ ಪದಕ, ಉಷಾರತ್ ಮಿರಾಶಿ-51ಕೆ.ಜಿ. ವಿಭಾಗ ಪ್ರಿಸ್ಟೈಲ್, ಚಿನ್ನದ ಪದಕ, ರೋಹನ್ ದೊಡ್ಮಣಿ-45 ಕೆ.ಜಿ.ವಿಭಾಗ ಪ್ರಿಸ್ಟೈಲ್- ಕಂಚಿನ ಪದಕ, ಅಶೋಕ ಮಾಕನ್ನವರ- 60ಕೆ.ಜಿ. ವಿಭಾಗ ಗ್ರೀಕೋ ರೋಮನ್, ಕಂಚಿನ ಪದಕ ಪಡೆದುಕೊಂಡಿದ್ದಾರೆ.

ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಕುಸ್ತಿ ಪಟುಗಳು ದೆಹಲಿಯಲ್ಲಿ ಡಿ. 14ರಿಂದ 19ರವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.  | ಕಾಡೇಶ ನ್ಯಾಮಗೌಡ, ಹಳಿಯಾಳ ಕುಸ್ತಿ ವಸತಿ ನಿಲಯದ ಕೋಚ್ ಹಾಗೂ ಕ್ರೀಡಾಧಿಕಾರಿ