ಮದುವೆ ಮೆರವಣಿಗೆ ವೇಳೆ ಟ್ರಕ್​ ಹರಿದು 13 ಸಾವು, ವಧು ಸೇರಿದಂತೆ 15 ಮಂದಿ ಸ್ಥಿತಿ ಗಂಭೀರ

ಪ್ರತಾಪಗಢ(ರಾಜಸ್ಥಾನ): ಮದುವೆ ಮೆರವಣಿಗೆಯ ವೇಳೆ ಟ್ರಕ್​ ಹರಿದು 13 ಮಂದಿ ಸಾವಿಗೀಡಾಗಿ 15 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ತಡರಾತ್ರಿ ರಾಜಸ್ಥಾನ ಪ್ರತಾಪಗಢದಲ್ಲಿ ನಡೆದಿದೆ.

ರಾಜಸ್ಥಾನದ ರಾಜಧಾನಿ ಜೈಪುರದಿಂದ 417 ಕಿ.ಮೀ ದೂರವಿರುವ ಪ್ರತಾಪಗಢ ಹಾಗೂ ಜೈಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಅಂಬಾವಾಲಿ ಗ್ರಾಮದ ಬಳಿ ಈ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಬಳಿಯ ಮನೆಗಳಲ್ಲಿ ವಾಸಿಸುತ್ತಿದ್ದ ಜನರು ನಿನ್ನೆ ತಡರಾತ್ರಿ ಮದುವೆ ಮೆರವಣಿಗೆಯಿದ್ದ ಕಾರಣ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿರುವಾಗ ಜವರಾಯನಂತೆ ಬಂದ ಟ್ರಕ್​ ಅವರ ಮೇಲೆ ಹರಿದಿದೆ. ಘಟನೆಯಲ್ಲಿ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 4 ಮಂದಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ.

ವಧು ಸೇರಿದಂತೆ ಗಂಭೀರ ಗಾಯಗೊಂಡಿರುವ 15 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)