13ಕ್ಕೆ ಕಡತ ವಿಲೇ ಅಭಿಯಾನ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಮುಂಬರುವ ಭಾನುವಾರವೂ (ಜ.13) ಒಳ್ಳೆಯ ಉದ್ದೇಶದಿಂದ ಕಾರ್ಯ ನಿರ್ವಹಿಸಲಿದೆ.

ವಿಲೇವಾರಿಯಾಗದೇ ಬಾಕಿ ಉಳಿದಿ ರುವ ಕಡತಗಳನ್ನು ಒಂದೇ ಬಾರಿ ಆದ್ಯತೆ ಮೇಲೆ ವಿಲೇವಾರಿ ಮಾಡಲು ನಿರ್ಧರಿಸಿದೆ. ಈ ಸಂಬಂಧ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದು, ಭಾನುವಾರ ಅಧಿಕಾರಿ- ಸಿಬ್ಬಂದಿ ಕಡ್ಡಾಯವಾಗಿ ಹಾಜರಿದ್ದು ಕಾರ್ಯ ನಿರ್ವಹಿಸುವಂತೆ ತಾಕೀತು03 ಮಾಡಿದ್ದಾರೆ.

ಇಲಾಖೆಯಲ್ಲಿ ಆಡಳಿತವನ್ನು ಚುರುಕುಗೊಳಿ ಸುವ ನಿಟ್ಟಿನಲ್ಲಿ ಬಾಕಿ ಇರುವ ಕಡತಗಳ ಪರಿಶೀಲನೆ ಸಭೆಯನ್ನು ಜ.7ರಂದು ನಡೆಸಲಾಯಿತು. ಪರಿಶೀಲನೆ ವೇಳೆ ಇಲಾಖೆಯಲ್ಲಿ ವಿಲೇವಾರಿಯಾಗದೆ ಉಳಿದ ಕಡತಗಳ ಸಂಖ್ಯೆ ಗಮನಿಸಲಾಯಿತು. ಒಂದು ವರ್ಷಕ್ಕಿಂತ ಕಡಿಮೆ ಅವಧಿಯ 1,750, 1ರಿಂದ ಎರಡು ವರ್ಷ ಅವಧಿಯ 850, 2ರಿಂದ 3 ವರ್ಷದ 200, ಮೂರು ವರ್ಷ ಮೇಲ್ಪಟ್ಟ 150 ಕಡತ ಸೇರಿ ಒಟ್ಟಾರೆ 3,070 ಕಡತಗಳು ಬಾಕಿ ಇವೆ.

ಕಡತಗಳು ಬಾಕಿ ಉಳಿದಿರುವು ದರಿಂದ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಸಾರ್ವಜನಿಕ ಹಿತದೃಷ್ಟಿಯಿಂದ ಕಡತಗಳನ್ನು ತುರ್ತಾಗಿ ವಿಲೇವಾರಿ ಮಾಡುವುದು ಅತಿ ಅವಶ್ಯಕವಾಗಿದೆ ಎಂದು ಸಚಿವರು ಹೇಳಿದ್ದಾರೆ. ಜ.12 ಮತ್ತು 13ರಂದು ವಿಶೇಷ ಕಡತ ವಿಲೇವಾರಿ ಅಭಿಯಾನ ನಡೆಸಬೇಕು. ಈ ಸಂಬಂಧ 14ರಂದು ವರದಿ ಸಲ್ಲಿಸಬೇಕೆಂದು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸ ಬೇಕು ಹಾಗೂ ಅಭಿಯಾನದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ನೌಕರರು ಗೈರಾದಲ್ಲಿ ಅವರ ಮೇಲೆ ತಕ್ಷಣವೇ ಶಿಸ್ತುಕ್ರಮ ಕೈಗೊಳ್ಳುವಂತೆ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದ್ದಾರೆ.