ಮೇ 14ರಂದು 127.6 ಮಿ.ಮೀ. ವರ್ಷಧಾರೆ; ರೈತರ ಬೆಳೆಗಳಿಗೆ ಅಪಾರ ಹಾನಿ

blank

ಮಂಜುನಾಥ ಎಸ್. ಅಂಗಡಿ ಧಾರವಾಡ
ಈ ಬಾರಿ ಪೂರ್ವ ಮುಂಗಾರು ಮಳೆ ಆರ್ಭಟಿಸುತ್ತಿದೆ. ಮೇನಲ್ಲಿ ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗಿದ್ದು, ಮುಂಗಾರು ಚಟುವಟಿಕೆಗಳಿಗೆ ಪೂರಕವಾಗಿದೆ. ಮೇ 14ರಂದು ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದೆ. ನಗರದ ಕೃಷಿ ವಿಶ್ವವಿದ್ಯಾಲಯ ಮುಖ್ಯ ಕ್ಯಾಂಪಸ್‌ನಲ್ಲಿರುವ ಗ್ರಾಮೀಣ ಕೃಷಿ ಮೌಸಂ ಸೇವಾ (ಜಿಕೆಎಂಎಸ್) ಹವಾಮಾನ ವೀಕ್ಷಣಾಲಯದಲ್ಲಿ ದಾಖಲಾದ ಮಳೆಯ ಪ್ರಮಾಣ, 1985ರ ನಂತರ 3ನೇ ಅತಿ ಹೆಚ್ಚು ಎಂದು ವರದಿಯಾಗಿದೆ.
ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನಶಾಸ್ತç ವಿಭಾಗದ ಅಡಿ ಕಾರ್ಯನಿರ್ವಹಿಸುವ ಜಿಕೆಎಂಎಸ್ ಮಳೆಯ ಪ್ರಮಾಣವನ್ನು ದಾಖಲಿಸಿಕೊಳ್ಳುತ್ತದೆ. ಪೂರ್ವ ಮುಂಗಾರು, ಮುಂಗಾರು, ಹಿಂಗಾರು ದಿನಗಳಲ್ಲಿ ದಾಖಲಾಗುವ ಪ್ರತಿದಿನದ ಮಳೆಯ ಪ್ರಮಾಣ ಇಲ್ಲಿ ದಾಖಲಾಗುತ್ತದೆ. ಭಾರತೀಯ ಹವಾಮಾನ ಇಲಾಖೆಯಿಂದ ನೀಡಲಾಗುವ ಮಾಹಿತಿಯನ್ನಾಧರಿಸಿ ಕೇಂದ್ರವು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಜಿಲ್ಲೆಯ ರೈತರಿಗೆ ಹವಾಮಾನ ಮುನ್ಸೂಚನೆ ನೀಡುತ್ತದೆ. ಕೃಷಿ, ತೋಟಗಾರಿಕೆ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರಗಳು, ರೈತರ ವಾಟ್ಸಾಪ್ ಗ್ರುಪ್‌ಗಳು ಮತ್ತು ರೈತ ಉತ್ಪಾದಕ ಸಂಘಗಳಿಗೆ ನಿರಂತರ ಮಾಹಿತಿ ನೀಡುತ್ತದೆ.
ಈ ಕೇಂದ್ರದಲ್ಲಿ 1985ರಿಂದ ಮಳೆ ಪ್ರಮಾಣದ ಅಂಕಿ- ಅಂಶ ಇದೆ. ಅದರ ಅನ್ವಯ ಮೇ 14ರಂದು ಸುರಿದ ಮಳೆ ಪೂರ್ವ ಮುಂಗಾರು ಅವಽಯಲ್ಲಾದ 1 ದಿನದ 3ನೇ ಅತಿ ಹೆಚ್ಚು ಮಳೆ ಎಂದು ವರದಿಯಾಗಿದೆ. ಇದು ಕೃಷಿ ವಿವಿ ಮುಖ್ಯ ಕ್ಯಾಂಪಸ್ ಸುತ್ತಲಿನ 10ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ದಾಖಲಾದ ಮಳೆ ಪ್ರಮಾಣವಾಗಿದೆ. ಈ ಕೇಂದ್ರದ ಅಂಕಿಅ0ಶದ ಅನ್ವಯ ಮಾ. 1ರಿಂದ ಮೇ 15ರವರೆಗೆ 133.4 ಮಿ.ಮೀ. ವಾಡಿಕೆ ಮಳೆ ನಿರೀಕ್ಷಿಸಲಾಗಿತ್ತು. ವಾಸ್ತವವಾಗಿ 255.4 ಮಿ.ಮೀ. ಮಳೆಯಾಗಿದೆ. ಇದರಿಂದ ಜಿಲ್ಲೆಯ ಹಲವೆಡೆ ಅಪಾರ ಹಾನಿಯಾಗಿದೆ. ಅಡಿಕೆ ತೋಟ, ತರಕಾರಿ ಬೆಳೆಗಳು ಕೊಚ್ಚಿ ಹೋಗಿವೆ.

blank

ಹೇಗಿದೆ ಮುಂಗಾರು…?
ಈ ಬಾರಿ ಮೇ 27ರಂದು ಮುಂಗಾರು ಮಳೆ ಕೇರಳ ಪ್ರವೇಶವಾಗಲಿದೆ. ಅಲ್ಲಿಂದ ಜೂ. 2ರಿಂದ 5ರವರೆಗೆ ರಾಜ್ಯ ಪ್ರವೇಶಿಸುವ ನಿರೀಕ್ಷೆ ಇದೆ. ಪ್ರತಿವರ್ಷದ ಮುಂಗಾರು ಮಳೆಯನ್ನು ಸರಾಸರಿಗಿಂತ ಕಡಿಮೆ, ಸರಾಸರಿ ಹಾಗೂ ಸರಾಸರಿಗಿಂತ ಹೆಚ್ಚು ಮಳೆ ಎಂದು ವಿಂಗಡಿಸಲಾಗುತ್ತದೆ. ಈ ಬಾರಿ ಸರಾಸರಿ ಮಳೆಯಾಗುವುದಾಗಿ ಹವಾಮಾನ ಇಲಾಖೆ ನಿರೀಕ್ಷಿಸಿದ್ದು, ರೈತರಿಗೆ ಅತಿವೃಷ್ಟಿ- ಅನಾವೃಷ್ಟಿಯ ಸಂಕಷ್ಟ ಬಾರದು.

3 ವರ್ಷಗಳ ಹಿಂದೆ 3 ಎಕರೆ ಅಡಿಕೆ ಗಿಡ ನೆಟ್ಟಿದ್ದೆವು. ಇತ್ತೀಚೆಗೆ ಸುರಿದ ಮಳೆಯಿಂದ 50ಕ್ಕೂ ಹೆಚ್ಚು ಗಿಡಗಳು ಕಿತ್ತು ಬಿದ್ದಿವೆ. ಜಮೀನಿನಲ್ಲಿರುವ ಮಣ್ಣು ಕೂಡ ಕೊಚ್ಚಿ ಹೋಗಿದೆ. ಪಕ್ಕದಲ್ಲಿರುವ ಹಳ್ಳದ ಹೂಳೆತ್ತಿದ್ದರೆ ನಮಗೆ ಹಾನಿ ಆಗುತ್ತಿರಲಿಲ್ಲ.
– ಜಗದೇವಯ್ಯ ಚಿಕ್ಕಮಠ, ಕವಲಗೇರಿ ರೈತ

Share This Article
blank

ಇದು ನೇರಳೆ ಹಣ್ಣಿನ ಸೀಸನ್​ ಮಿಸ್​ ಮಾಡ್ದೆ ತಿನ್ನಿ… ತಿಂದ್ರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ…Black jamun

Black jamun : ಆಯಾ ಋತುವಿನಲ್ಲಿ ಸಿಗುವ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು…

ಬೆಳಿಗ್ಗೆ ಈ ಸೂಪರ್​ ಫುಡ್​ಗಳನ್ನು ಸೇವಿಸಿ: ನಿಮ್ಮ ದೇಹದಲ್ಲಾಗುವ ಸಕಾರಾತ್ಮಕ ಬದಲಾವಣೆ ಗಮನಿಸಿ | Superfoods

Superfoods: ಸಾಮಾನ್ಯವಾಗಿ ಬೆಳಗಿನ ಸಮಯವು ದಿನಪೂರ್ತಿ ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಎದ್ದ ತಕ್ಷಣ ನೀವು ಏನು ಮಾಡುತ್ತೀರಿ…

blank