1230 ಕೆಜಿ ಪ್ಲಾಸ್ಟಿಕ್ ವಶ

ಗದಗ: ನಗರಸಭೆ ಪರಿಸರ ಇಂಜಿನಿಯರ್ ಗಿರೀಶ ತಳವಾರ, ಆರೋಗ್ಯ ನಿರೀಕ್ಷಕ ಎ.ವೈ. ದೊಡ್ಡಮನಿ, ಎಂ.ಎಂ. ಮಕಾನದಾರ ನೇತೃತ್ವದ ಅಧಿಕಾರಿಗಳ ತಂಡ ನಗರದಲ್ಲಿ ಅಂಗಡಿಗಳ ಮೇಲೆ ಗುರುವಾರ ದಾಳಿ ನಡೆಸಿತು.

1230 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಲ್ಲದೆ, ಅಂಗಡಿಕಾರರಿಂದ 12,000 ರೂ. ದಂಡ ವಸೂಲಿ ಮಾಡಲಾಯಿತು. ದಾಳಿಯಲ್ಲಿ ಸಿ.ಆರ್. ಹಾದಿಮನಿ, ಕೆಂಚಪ್ಪ ಪೂಜಾರ, ಹೇಮೇಶ, ನಾಗರಾಜ ದೊಡ್ಡಮನಿ, ಎಂ.ಎಚ್. ಹರ್ಲಾಪುರ, ಮಹೇಶ ಐನಾಪುರ, ಶ್ರೀನಿವಾಸ ಜಂಬಲದಿನ್ನಿ, ಮುತ್ತು ಚಲವಾದಿ, ಆರ್.ಆರ್. ಬೋಸಲೆ, ಬಿ.ವಿ. ಮ್ಯಾಗೇರಿ ಇತರರಿದ್ದರು.

Leave a Reply

Your email address will not be published. Required fields are marked *