ಹಪ್ಪಳಕ್ಕಾಗಿ ಮದುವೆ ಮಂಟಪದಲ್ಲಿ ನಡೆಯಿತು ಭಾರಿ ಗಲಾಟೆ: ನಷ್ಟವಾಗಿದ್ದು ಬರೋಬ್ಬರಿ 1.5 ಲಕ್ಷ ರೂಪಾಯಿ

ಕೊಚ್ಚಿ: ಮದುವೆ ಸಮಾರಂಭದ ವೇಳೆ ಹೆಚ್ಚುವರಿ ಹಪ್ಪಳಕ್ಕಾಗಿ ನಡೆದ ಗಲಾಟೆಯಲ್ಲಿ ಟೇಬಲ್ಸ್​ ಮತ್ತು 25 ಕುರ್ಚಿಗಳಿಗೆ ಹಾನಿಯಾಗಿದ್ದು ಸೇರಿದಂತೆ ಕಲ್ಯಾಣ ಮಂಟಪಕ್ಕೆ ಸುಮಾರು 1.5 ಲಕ್ಷ ರೂಪಾಯಿ ನಷ್ಟವಾಗಿರುವ ಘಟನೆ ಕೇರಳದ ಹರಿಪಾದದಲ್ಲಿ ನಡೆದಿದೆ. ಈ ಘಟನೆ ಭಾನುವಾರ (ಆ.28) ಮುತ್ತೊಮ್​ನಲ್ಲಿ ನಡೆದಿದೆ. ಮದುವೆ ವೇಳೆ ವರನ ಕಡೆಯವರು ಎರಡನೇ ಬಾರಿಗೆ ಹಪ್ಪಳವನ್ನು ಕೇಳಿದರು. ಇದು ಎರಡು ಗುಂಪಿನ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ವಾಗ್ವಾದ ಹೊಡೆದಾಟಕ್ಕೂ ತಿರುಗಿ, ಕಲ್ಯಾಣ ಮಂಟಪದಲ್ಲೇ ಎರಡು ಗುಂಪಿನವರು ಬಡಿದಾಡಿಕೊಂಡರು. ಇದೇ ಸಂದರ್ಭದಲ್ಲಿ … Continue reading ಹಪ್ಪಳಕ್ಕಾಗಿ ಮದುವೆ ಮಂಟಪದಲ್ಲಿ ನಡೆಯಿತು ಭಾರಿ ಗಲಾಟೆ: ನಷ್ಟವಾಗಿದ್ದು ಬರೋಬ್ಬರಿ 1.5 ಲಕ್ಷ ರೂಪಾಯಿ