More

  ಜಾರ್ಖಂಡ್‌ನಲ್ಲಿ ಭೀಕರ ರೈಲು ಅಪಘಾತ; 12ಕ್ಕೂ ಹೆಚ್ಚು ಸಾವು, ಹಲವರಿಗೆ ಗಂಭೀರ ಗಾಯ

  ರಾಂಚಿ: ಜಾರ್ಖಂಡ್‌ನ ಜಮ್ತಾರ ಜಿಲ್ಲೆಯಲ್ಲಿ ಬುಧವಾರ ಸಂಜೆ ಭೀಕರ ರೈಲು ಅಪಘಾತ ಸಂಭವಿಸಿದೆ. ಜಮ್ತಾರ ಜಿಲ್ಲೆಯ ಕಲಝಾರಿಯ ರೈಲು ನಿಲ್ದಾಣದ ಬಳಿ ರೈಲು ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ 12 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

  ಇದನ್ನೂ ಓದಿ:2029 ರಿಂದ ಒಂದು ರಾಷ್ಟ್ರ, ಒಂದು ಚುನಾವಣೆ?

  ರೈಲ್ವೆ ಪೊಲೀಸರು ಹಾಗೂ ಸಿಬ್ಬಂದಿಯೂ ಕೂಡಲೇ ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಸ್ಥಳದಳಲ್ಲಿ ರಕ್ಷಣಾ ಕಾರ್ಯನಡೆದಿದೆ ಎನ್ನಲಾಗಿದೆ.

  ಗಾಯಗೊಂಡ ವ್ಯಕ್ತಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಭಾಗಲ್ಪುರಕ್ಕೆ ಹೊರಟಿದ್ದ ಅಂಗಾ ಎಕ್ಸ್‌ಪ್ರೆಸ್‌ನಲ್ಲಿದ್ದ ಪ್ರಯಾಣಿಕರು ರೈಲು ಹಳಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ರೈಲಿನಲ್ಲಿದ್ದ ಪ್ರಯಾಣಿಕರು ಗಲಿಬಿಲಿಗೊಂಡಿದ್ದಾರೆ. ಅಷ್ಟೇ ಅಲ್ಲ, ಆತಂಕದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಜಿಗಿದಿದ್ದಾರೆ. ಆದರೆ, ದುರದೃಷ್ಟವಶಾತ್‌, ಮತ್ತೊಂದು ಕಡೆಯಿಂದ ಬರುತ್ತಿದ್ದ ಝಾಝಾ-ಅಸನೋಲ್‌ ರೈಲು ಅವರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

  ಇನ್ನು ರೈಲು ಡಿಕ್ಕಿಯಾದ ರಭಸಕ್ಕೆ 12 ಜನರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವರು ತೀವ್ರ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಅಪಘಾತ ಸಂಭವಿಸುತ್ತಲೇ ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇನ್ನು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್‌ ವ್ಯವಸ್ಥೆಯನ್ನೂ ಮಾಡಲಾಗಿದೆ.

  ಮೂಲಗಳ ಪ್ರಕಾರ, ಹಲವರು ವ್ಯಕ್ತಿಗಳು ಅಂಗಾ ಎಕ್ಸ್‌ಪ್ರೆಸ್‌ನಿಂದ ಇಳಿದಿದ್ದರು, ಅದು ಜಮ್ತಾರಾದ ಕಾಲಜಾರಿಯಾ ರೈಲ್ವೆ ನಿಲ್ದಾಣದಲ್ಲಿ ನಿಂತಿತ್ತು. ಅಷ್ಟರಲ್ಲಿ ಲೋಕಲ್ ರೈಲು ಹಾದು ಹೋಗಿದ್ದು, ಇಬ್ಬರು ವ್ಯಕ್ತಿಗಳಿಗೆ ದುರಂತವಾಗಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇದುವರೆಗೆ 12 ಜನ ಮೃತಪಟ್ಟಿರುವ ಶಂಕೆ ಇದೆ. ಸಾವಿನ ಸಂಖ್ಯೆ ಇನ್ನೂ ಜಾಸ್ತಿಯಾಗುವ ಸಾಧ್ಯವಾಗಿದೆ. ಸಾವಿನ ಸಂಖ್ಯೆ ಇಷ್ಟೇ ಎಂದು ಈಗಲೇ ಹೇಳಲು ಆಗುವುದಿಲ್ಲ” ಎಂದು ಜಮ್ತಾರ ಪೊಲೀಸರು ಮಾಹಿತಿ ನೀಡಿದ್ದಾರೆ.

  ಕಾವಲಯ್ಯ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಆನೆ! ಇದರಲ್ಲಿದೆ ಟ್ಟಿಸ್ಟ್​, ವಿಡಿಯೋ ವೈರಲ್!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts