More

    12 ದಿನಗಳ ಬಳಿಕ ಗವಿಯಿಂದ ಹೊರಬಂದ ಸೇವಾಲಾಲ್ ಕುಮಾರ ಮಹಾರಾಜರು

    ಬ್ಯಾಡಗಿ: 12 ದಿನಗಳ ಕಾಲ ನೀರು, ಪ್ರಸಾದ ಸೇವಿಸದೇ ಗವಿಯಲ್ಲಿ ಅನುಷ್ಠಾನಕ್ಕೆ ಕುಳಿತಿದ್ದ ಸವಣೂರು ತಾಲೂಕಿನ ಕೃಷ್ಣಾಪುರದ ಮಠದ ಸೇವಾಲಾಲ್ ಕುಮಾರ ಮಹಾರಾಜರು ಭಾನುವಾರ ಗವಿಯಿಂದ ಹೊರಬಂದು ದರ್ಶನ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

    ತಾಲೂಕಿನ ಗುಡ್ಡದಮಲ್ಲಾಪುರದ ಗ್ರಾಮದ ಗುಡ್ಡದ ಮೇಲಿರುವ ಗವಿಯಲ್ಲಿ ಸೇವಾಲಾಲ್ ಕುಮಾರ ಮಹಾರಾಜರು ಜ. 1ರಂದು ಮಧ್ಯಾಹ್ನ 12 ಗಂಟೆಗೆ ಗವಿಯ ಒಳಗೆ ಅನುಷ್ಠಾನಕ್ಕೆ ಕುಳಿತು ಹೊರಬಾಗಿಲನ್ನು ಇಟ್ಟಿಗೆಗಳಿಂದ ಮುಚ್ಚಿಸಿದ್ದರು ಎನ್ನಲಾಗಿದೆ. 12 ದಿನಗಳ ನಂತರ ಭಾನುವಾರ ಹೊರಬಂದು ದರ್ಶನ ನೀಡಿದರು. ಬಳಿಕ ಗ್ರಾಮಸ್ಥರು ಮೆರವಣಿಗೆ ಮೂಲಕ ಪುರಪ್ರವೇಶ ಮಾಡಿಕೊಂಡು ದೇವಸ್ಥಾನಗಳಿಗೆ ಕರೆದೊಯ್ದರು. ಬಳಿಕ ಇಲ್ಲಿನ ಷ.ಬ್ರ. ಮೂಕಪ್ಪ ಶ್ರೀಗಳ ಮಠಕ್ಕೆ ಕುಮಾರ ಮಹಾರಾಜರು ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

    ಬಳಿಕ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ದೇಶದ ರೈತರ, ಸೈನಿಕರ ಒಳಿತು ಹಾಗೂ ಎಲ್ಲರಿಗೂ ಮಂಗಲವಾಗಲಿ ಎಂದು ಸಂಕಲ್ಪ ಮಾಡಿರುವುದಾಗಿ ತಿಳಿಸಿದರು.

    ಶ್ರೀಗಳ ದರ್ಶನಕ್ಕೆ ಶಿರಹಟ್ಟಿ, ಬ್ಯಾಡಗಿ, ಹಾವೇರಿ, ಶಿಗ್ಗಾಂವಿ, ಸವಣೂರು, ರಾಣೆಬೆನ್ನೂರ ಸೇರಿ ವಿವಿಧ ಗ್ರಾಮಗಳಿಂದ ಆಗಮಿಸಿದ ಜನ ಗಮಿಸಿದ್ದರು. ಕುಮಾರ ಮಹಾರಾಜರ ಅನುಷ್ಠಾನ ಪೂಜೆ ಮಂಗಲ ಕಾರ್ಯಕ್ರಮಕ್ಕೆ ವಿವಿಧ ಶ್ರೀಗಳು ಆಗಮಿಸಿದ್ದರು. ಶ್ರೀಗಳನ್ನು ನೋಡಲು ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ತಾ.ಪಂ. ಸದಸ್ಯ ಶಾಂತಪ್ಪ ದೊಡ್ಡಮನಿ, ಗ್ರಾ.ಪಂ. ಸದಸ್ಯ ಬಸವರಾಜ ದೊಡ್ಡಮನಿ, ಪ್ರಭಣ್ಣ ದೇಸಾಯಿ, ಮೂಕೇಶ್ವರ ದಾಸೋಹಮಠ, ಮೂಕಣ್ಣ ಮೂಡಿ, ಸಂಗಪ್ಪ ಪೂಜಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts