ಚಿಕ್ಕಮಗಳೂರು: ಜನಪ್ರಿಯ ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ ಸಾವಿರಾರು ಕುಟುಂಬಗಳಿಗೆ ರಾಜ್ಯಸರ್ಕಾರ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸುವ ಮೂಲಕ ಬೆಳಕಿನೆಡೆಗೆ ಕೊಂಡೊಯ್ಯುವ ಮಹತ್ತರ ಕಾರ್ಯ ಮಾಡುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನAದ ಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಮೆಸ್ಕಾಂ ಕಚೇರಿಯಲ್ಲಿ ಗೃಹಜ್ಯೋತಿ ಗ್ಯಾರಂಟಿ ಕುರಿತು ಮೆಸ್ಕಾಂ ಅಧಿಕಾರಿಗಳ ಜೊತೆಗೂಡಿ ಗುರುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ಒಟ್ಟು ೩.೫೨ ಲಕ್ಷ ಮೀಟರ್‌ಗಳ ಪೈಕಿ ೨.೯೮ ಲಕ್ಷ ಮೀಟರ್‌ಗಳು ನೊಂದಣೀಯಾಗಿದೆ. ೧.೯೨ ಲಕ್ಷ ಮೀಟರ್‌ದಾರರು ಯಾವುದೇ ಶುಲ್ಕ ಭರಿಸದೇ ಗೃಹ ಜ್ಯೋತಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.
ಕಳೆದ ಆಗಸ್ಟ್ನಿಂದ ಪ್ರಸ್ತುತ ಜೂನ್ ತಿಂಗಳವರೆಗೂ ಚಿಕ್ಕಮಗಳೂರು, ಕಳಸ, ಮೂಡಿಗೆರೆ, ಕಡೂರು, ತರೀಕೆರೆ, ಅಜ್ಜಂಪುರ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳಿಗೆ ರಾಜ್ಯ ಸರ್ಕಾರ ೧೧೯.೧೪ ಕೋಟಿ ರೂ. ವಿದ್ಯುತ್ ಶುಲ್ಕವನ್ನು ಭರಿಸುವ ಜೊತೆಗೆ ಜನಸಾಮಾನ್ಯರ ಬದುಕಿಗೆ ಆಶಾದೀಪವಾಗಿದೆ ನಿಂತಿದೆ ಎಂದು ಹೇಳಿದರು.
ಒಂದು ಕುಟುಂಬದಲ್ಲಿ ಕನಿಷ್ಟ ೨೦೦ ಯುನಿಟ್ ವಿದ್ಯುತ್ ಬಳಸುವ ಮೀಟರ್‌ಗೆ ಶುಲ್ಕರಹಿತ ಸೇವೆ ಒದಗಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಗೃಹಜ್ಯೋತಿ ಯೋಜನೆ ಅನ್ವಯವಾಗಲಿದೆ. ಆಧುನಿಕ ಯುಗದಲ್ಲಿ ಕಂಪ್ಯೂಟರ್ ಸೇರಿದಂತೆ ಮತ್ತಿತರ ಕೆಲಸಗಳಿಗೆ ವಿದ್ಯುತ್ ಅನಿವಾರ್ಯ ಹಿನ್ನೆಲೆಯಲ್ಲಿ ಸೌಲಭ್ಯ ವಿಸ್ತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಅನ್ವಯವಾಗಲಿದೆ. ಒಂದು ಮನೆಯಿಂದ ಮತ್ತೊಂದು ಮನೆಗೆ ಬಾಡಿಗೆಗೆ ತೆರಳಿದರೆ ಸೌಲಭ್ಯ ಲಭಿಸುವುದೇ ಎಂಬ ಸಂಶಯವಿರುವ ಹಿನ್ನೆಲೆ, ಹಳೇ ಮನೆ ಸ್ಥಳಾಂತರಿಸುವ ಬಗ್ಗೆ ಸೇವಾಸಿಂಧು ಅಥವಾ ಕಚೇರಿಗೆ ತೆರಳಿ ಡಿಲಿಂಕ್ ಮಾಡಿ, ಹೊಸ ಮನೆ ಮೀಟರ್ ಸಂಖ್ಯೆ ಹಾಗೂ ಆಧಾರ್ ಜೋಡಿಸಿದರೆ ಸೌಲಭ್ಯ ಪಡೆಯಬಹುದು ಎಂದರು.
ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವರ ಆಶಯದಂತೆ ಸರ್ವಜನರಿಗೂ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಗ್ಯಾರಂಟಿ ಪ್ರಾಧಿಕಾರವು ಮೆಸ್ಕಾಂ ಅಧಿಕಾರಿಗಳ ಜೊತೆಗೂಡಿ ಚರ್ಚಿಸಿ ಸೌಲಭ್ಯ ತಲುಪಿರುವ ಮಾಹಿತಿ ಸ್ವವಿವರವಾಗಿ ಬಹಿರಂಗಪಡಿಸುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಮೆಸ್ಕಾಂ ಅಧಿಕಾರಿ ಲೋಕೇಶ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಚಂದ್ರಮೌಳಿ, ಸದಸ್ಯರಾದ ಹೇಮಾವತಿ, ಬಸವರಾಜು, ತಾಲೂಕು ಅಧ್ಯಕ್ಷ ಮಲ್ಲೇಶಸ್ವಾಮಿ, ತಾಲೂಕು ಸದಸ್ಯರಾದ ಕೆಂಪನಹಳ್ಳಿ ಪುನೀತ್, ಅನ್ಸರ್ ಆಲಿ, ಮೆಸ್ಕಾಂ ಅಧಿಕಾರಿಗಳಾದ ಎಂ.ಎಸ್.ನAದೀಶ್, ಎಚ್.ಅನುಪಮಾ, ನಾಗಾರ್ಜುನ, ನಿರಂಜನ್, ಪ್ರದೀಪ್, ಮಾರುತಿ ಮತ್ತಿತರರಿದ್ದರು.