ಸೋಮವಾರದಿಂದ ಹಾರಾಟ ನಡೆಸದಿರಲು ಜೆಟ್​ಏರ್​ವೇಸ್​ನ 1100 ಜನ ಪೈಲೆಟ್​ಗಳು ನಿರ್ಧಾರ

ಮುಂಬೈ: ಜೆಟ್​ ಏರ್​ವೇಸ್​ನ 1100 ಪೈಲೆಟ್​ಗಳು ಬಾಕಿ ವೇತನ ಪಾವತಿಸದಿರುವುದರಿಂದ ಸೋಮವಾರ ಬೆಳಗ್ಗೆಯಿಂದ ಹಾರಾಟ ನಡೆಸದಿರಲು ನಿರ್ಧರಿಸಿದ್ದಾರೆ.

ಪೈಲೆಟ್​ಗಳು, ಎಂಜಿನಿಯರ್ಸ್​, ಹಿರಿಯ ನಿರ್ವಹಣಾಧಿಕಾರಿಗಳು ಜನವರಿ ತಿಂಗಳಿಂದ ವೇತನ ಪಡೆದಿಲ್ಲ. ಇವರೊಂದಿಗೆ ಸಹ ಕೆಲಸಗಾರರಿಗೆ ಮಾರ್ಚ್ ತಿಂಗಳ ವೇತನವನ್ನು ನೀಡಿಲ್ಲ.

ಸುಮಾರು ಮೂರು ತಿಂಗಳಿಂದ ವೇತನ ಪಾವತಿಸದ ಕಾರಣ ಏ.15ರಿಂದ 1100 ಪೈಲೆಟ್​ಗಳು ಹಾರಾಟ ನಡೆಸದಿರುವುದಾಗಿ ನ್ಯಾಷನಲ್​ ಏವಿಯೇಟರ್ಸ್​ ಗಿಲ್ಡ್​ ಮೂಲಗಳು ತಿಳಿಸಿವೆ.

ಒಟ್ಟು 1600 ನೌಕರರಲ್ಲಿ 1100 ಜನ ನೌಕರರಿಗೆ ವೇತನ ಪಾವತಿಸದಿರುವ ಕುರಿತು ತಿಳಿಸಿದ್ದು ಏಪ್ರಿಲ್ 1ರಂದು ಒಕ್ಕೂಟ ತಿಳಿಸಿತ್ತು. 

ಮಾರ್ಚ್ 31ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತಾದರೂ, ನಿರ್ವಹಣಾ ಮಂಡಳಿಗೆ ಕಾಲಾವಕಾಶ ನೀಡಿ ಏಪ್ರಿಲ್​ 15ಕ್ಕೆ ಮುಂದೂಡಲಾಗಿತ್ತು.

ಜೆಟ್ ಏರ್​ವೇಸ್​ ಪ್ರಸ್ತುತ ಎಸ್​ಬಿಐ ಸಾಲದಾತರ ನೇತೃತ್ವದ ಒಕ್ಕೂಟದ ನಿಯಂತ್ರಣದಲ್ಲಿದೆ.