ಕಾಶ್ಮೀರದಲ್ಲಿ ಕಂದಕಕ್ಕೆ ಬಿದ್ದ ಬಸ್​: 11 ಮಂದಿ ಸಾವು

ಶ್ರೀನಗರ: ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಆಳದ ಕಣಿವೆಯೊಳಕ್ಕೆ ಬಸ್​ ಬಿದ್ದು 11 ಪ್ರಯಾಣಿಕರು ಮೃತಪಟ್ಟಿದ್ದಾರೆ.

ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 175 ಕಿ.ಮೀ. ದೂರದಲ್ಲಿರುವ ಪೂಂಚ್​ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಬಸ್​ ಲೋರನ್​ನಿಂದ ಪೂಂಚ್​ಗೆ ತೆರಳುತ್ತಿತ್ತು ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು ಗಾಯಗೊಂಡ ಇತರ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗುತ್ತಿದೆ. (ಏಜೆನ್ಸೀಸ್)