ಬಸ್​ಗೆ ಬೆಂಕಿ ಹಚ್ಚಿದ್ದ 11 ಮಂದಿ ಬಂಧನ

ಕನಕಪುರ: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ 11 ಬಸ್​ಗಳಿಗೆ ಕಲ್ಲು ತೂರಿ, 2 ಬಸ್​ಗಳಿಗೆ ಬೆಂಕಿ ಹಚ್ಚಿದ್ದ 11 ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಸೆ.3ರಂದು ತಾಲೂಕಿನಾದ್ಯಂತ ಕಾಂಗ್ರೆಸ್, ಜೆಡಿಎಸ್ ಅಭಿಮಾನಿಗಳು ಟೈರ್​ಗೆ ಬೆಂಕಿ ಹಚ್ಚಿ, ರಸ್ತೆ ಬಂದ್ ಮಾಡಿ ಪ್ರತಿಭಟಿಸಿದ್ದರು. ನಗರದ ಹೊರವಲಯದಲ್ಲಿನ ಕಲ್ಲಹಳ್ಳಿ ಗೇಟ್ ಬಳಿ ಒಂದು ಬಸ್​ನ ಗಾಜು ಪುಡಿ ಮಾಡಿ, 6 ಸೀಟುಗಳಿಗೆ ಬೆಂಕಿ ಹಚ್ಚಲಾಗಿತ್ತು.

ಉಯ್ಯಂಬಳ್ಳಿ ಹೋಬಳಿಯ ಚುಂಚಿ ಕಾಲನಿಯಲ್ಲಿ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರನ್ನು ಕೆಳಗಿಳಿಸಿ ಒಂದು ಬಸ್​ಗೆ ಬೆಂಕಿ ಹಚ್ಚಲಾಗಿತ್ತು. ಹಾಗೆಯೇ ಕೋಡಿಹಳ್ಳಿ ವ್ಯಾಪ್ತಿಯಲ್ಲಿ ಬಸ್​ಗಳಿಗೆ ಕಲ್ಲು ತೂರಾಟ ನಡೆಸಿದ್ದೂ ಸೇರಿ ಒಟ್ಟು 9 ಬಸ್​ಗಳ ಗಾಜನ್ನು ಒಡೆದು ಹಾಕಿದ್ದರು.

ಕೃತ್ಯಕ್ಕೆ ಸಬಂಧಿಸಿದಂತೆ ನ್ಯಾಯಾಲಯವು ಹಾನಿಯ ಬಗ್ಗೆ ವರದಿ ಕೇಳಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದ ತಂಡ ಸಾತನೂರು ಠಾಣಾ ವ್ಯಾಪ್ತಿಯಲ್ಲಿ 5, ಕನಕಪುರ ಟೌನ್ ವ್ಯಾಪ್ತಿಯಲ್ಲಿ 5 ಹಾಗೂ ಕೋಡಿಹಳ್ಳಿಯಲ್ಲಿ ಒಬ್ಬನನ್ನು ಬಂಧಿಸಿದೆ.

Leave a Reply

Your email address will not be published. Required fields are marked *