11ರಿಂದ ಬೆಳಗಾವಿಯಲ್ಲಿ ಗ್ರಾಮ ಶಿಲ್ಪಿ ಮೇಳ

ಬೆಳಗಾವಿ: ಆಧುನಿಕ ಭರಾಟೆಗೆ ಸಿಲುಕಿ ನಲುಗುತ್ತಿರುವ ಪರಂಪರಾಗತ ಕರಕುಶಲ ವಸ್ತುಗಳ ತಯಾರಿಕೆ ವಲಯ ಉತ್ತೇಜನಕ್ಕಾಗಿ ಲಘು ಉದ್ಯೋಗ ಭಾರತಿ ಕರ್ನಾಟಕ ಹಾಗೂ ಐಎಂಎಸ್ ಫೌಂಡೇಷನ್ ವತಿಯಿಂದ ನ.11ರಿಂದ 13ರ ವರೆಗೆ ‘ಗ್ರಾಮ ಶಿಲ್ಪಿ ಮೇಳ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಸಚಿನ್ ಸಬ್ನೀಸ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರ್ದಾರ್ ಮೈದಾನದಲ್ಲಿ ನ.11,12 ಹಾಗೂ 13ರಂದು ಆತ್ಮನಿರ್ಭರತೆಗಾಗಿ ಗ್ರಾಮಭಾರತ ಘೋಷ ವಾಕ್ಯದಡಿ ಗ್ರಾಮ ಶಿಲ್ಪಿ ಮೇಳ ಆಯೋಜಿಸಲಾಗಿದ್ದು, ಮೇಳದಲ್ಲಿ ಪಾರಂಪರಿಕ ಕರಕುಶಲ ವಸ್ತುಗಳ ಪ್ರದರ್ಶನ ಮಾಡಲಾಗುತ್ತಿದೆ ಎಂದರು.

11ರಂದು ಬೆಳಗ್ಗೆ 11ರಿಂದ ಮೇಳ ಆರಂಭಗೊಳ್ಳಲಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್, ಸಕ್ಕರೆ ಮತ್ತು ಜವಳಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಜವಳಿ ಸಚಿವಾಲಯದ ಹಸ್ತಶಿಲ್ಪ ಅಭಿವೃದ್ಧಿ ಆಯುಕ್ತ ಶಾಂತಮನಿ ಪಾಲ್ಗೊಳ್ಳಲಿದ್ದಾರೆ. ಆರ್‌ಎಸ್‌ಎಸ್‌ನ ಸಹ ಪ್ರಾಂತ ಸಂಘಚಾಲಕ ಅರವಿಂದರಾವ ದೇಶಪಾಂಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಗಾಮ್ ಫೌಂಡರಿ ಕ್ಲಸ್ಟರ್ ಅಧ್ಯಕ್ಷ ರಾಮ ಭಂಡಾರೆ, ಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಎಂಎಲ್‌ಸಿ ಡಾ.ಸಾಬಣ್ಣ ತಳವಾರ ಹಾಗೂ ಶಾಸಕ ಅನಿಲ ಬೆನಕೆ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪ್ರದರ್ಶನದಲ್ಲಿ ರಾಜ್ಯ, ಹೊರರಾಜ್ಯದ ಪಾರಂಪರಿಕ ಕರಕುಶಲ ವಸ್ತುಗಳ ಒಟ್ಟು 200 ಮಳಿಗೆಗಳು ಇರಲಿದ್ದು, ವಿಶೇಷ ಸೇವೆ ಸಲ್ಲಿಸಿದ ಕುಶಲಕರ್ಮಿಗಳಿಗೆ ಸನ್ಮಾನ, ಆಯ್ದ ಕರಕುಶಲ ಉತ್ಪನ್ನಗಳ ತಯಾರಿಕಾ ಪ್ರಾತ್ಯಕ್ಷಿಕೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಉದ್ಯೋಗ ಅವಕಾಶಗಳ ಬಗ್ಗೆ ವಿಶೇಷ ಉಪನ್ಯಾಸ ಮತ್ತು ಚರ್ಚಾಕೂಟಗಳು ನಡೆಯಲಿವೆ ಎಂದರು. ಮಳಿಗೆಗಳಲ್ಲಿ ಕಟ್ಟಿಗೆ ಉತ್ಪನ್ನ, ಕಲ್ಲು, ಲೋಹ, ಮಣ್ಣು, ಚರ್ಮ, ಗಾಜು ಹಾಗೂ ಖಾದಿ ಉತ್ಪನ್ನಗಳು, ಕೈಮಗ್ಗ ಉತ್ಪನ್ನ, ಗೋವುಗಳ ಉತ್ಪನ್ನ, ನಾಟಿ ಔಷಧಗಳು ಹಾಗೂ ಪಾರಂಪರಿಕ ಆಟಿಕೆ ಮತ್ತು ಸಂಗೀತ ವಾದ್ಯ ಪ್ರದರ್ಶನ ಮತ್ತು ಮಾರಾಟ ಇರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಲಘು ಉದ್ಯೋಗ ಭಾರತಿ ಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷ ದಯಾನಂದ ನೇತಾಲ್ಕರ್, ಕಾರ್ಯದರ್ಶಿ ಶ್ರೀಧರ ಉಪ್ಪಿನ, ರಾಜ್ಯ ಮಹಿಳಾ ಘಟಕ ಸದಸ್ಯೆ ಪ್ರಿಯಾ ಪುರಾಣಿಕ, ಬಸವರಾಜ ರಾಮಪುರೆ ಹಾಗೂ ಇತರರು ಇದ್ದರು.

Share This Article

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…