1098 ಬಿಡುಗಡೆ ಭಾಗ್ಯ

ಎರಡು ವರ್ಷಗಳ ಹಿಂದೆಯೇ ಸಿದ್ಧಗೊಂಡಿದ್ದ ‘1098’ ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಅಂದಹಾಗೆ, ‘1098’ ಎಂಬುದು ಮಕ್ಕಳ ಸಹಾಯವಾಣಿ ಸಂಖ್ಯೆ. ಮಕ್ಕಳನ್ನು ಅಕ್ರಮ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದರೆ, ಅದನ್ನು ತಪ್ಪಿಸುವ ಉದ್ದೇಶಕ್ಕಾಗಿ ಸರ್ಕಾರವೇ ಈ ಸಹಾಯವಾಣಿಯನ್ನು ಆರಂಭಿಸಿತ್ತು. ಅದನ್ನೇ ಬಳಸಿಕೊಂಡು ಶ್ವೇತಾ ಎನ್ ಶೆಟ್ಟಿ ಸಿನಿಮಾ ಮಾಡಿದ್ದಾರೆ.

ಚಿತ್ರ ಬಿಡುಗಡೆಯಾಗುತ್ತಿರುವ ಖುಷಿಯಲ್ಲಿಯೇ ಇಡೀ ತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು. ಜೂ. 12 (ಬುಧವಾರ) ಬಾಲಕಾರ್ವಿುಕ ವಿರೋಧಿ ದಿನ ಆಗಿರುವುದರಿಂದ ಅಂದು ಬೆಂಗಳೂರಿನ ಚಂದ್ರೋದಯ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. 14 ವರ್ಷದೊಳಗಿನ ಮಕ್ಕಳಿಗೆ ಆವತ್ತು ಉಚಿತ ಪ್ರವೇಶ ಕಲ್ಪಿಸಿದೆ ಚಿತ್ರತಂಡ. ಆ ಬಳಿಕ ಜೂ. 15ರ ಶುಕ್ರವಾರ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. ಕೌತುಕದ ವಿಷಯ ಏನೆಂದರೆ, ಸೆನ್ಸಾರ್ ಮಂಡಳಿ ಚಿತ್ರ ನೋಡುವವರೆಗೂ ನಿರ್ದೇಶಕಿ ಶ್ವೇತಾ ಮತ್ತು ನಿರ್ವಪಕ ಶಂಕರ್ ಸೊಗಟೆ ಒಮ್ಮೆಯೂ ಭೇಟಿ ಆಗಿರಲಿಲ್ಲವಂತೆ. ದೂರವಾಣಿ ಮೂಲಕವೇ ನಿರ್ವಪಕರು ಕಥೆ ಕೇಳಿ, ಬಂಡವಾಳ ಹೂಡಲು ಮುಂದಾಗಿದ್ದರಂತೆ. ಕೃಷ್ಣ ಕಂಚನಹಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ. ಮಾಸ್ಟರ್ ಪ್ರೀತಮ್ ಆಯುಷ್, ಮಿಲನಾ, ಕುಮಾರ್ ಸೇರಿ ಹಲವು ಮಕ್ಕಳು ನಟಿಸಿದ್ದಾರೆ.

Leave a Reply

Your email address will not be published. Required fields are marked *