ಹರಿಹರ: ನಗರದ ಭರಂಪುರದ 108 ಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಕುಂಬಳೇಶ್ವರ 108 ಲಿಂಗೇಶ್ವರ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಶ್ರಾವಣ ಕಡೆ ಸೋಮವಾರದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು.
ಸರ್ವೋದಯ ಮಹಾಸಂಸ್ಥಾನ ಮಠದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀ ಕುಂಬಳೇಶ್ವರ ದೇವಸ್ಥಾನ, ಶ್ರೀ 108 ಲಿಂಗೇಶ್ವರ, ಶ್ರೀ ಬಸವೇಶ್ವರ, ಶ್ರೀ ಶನೇಶ್ವರ, ಶ್ರೀ ಗಣೇಶ, ಶ್ರೀ ಮೂಕಬಸವೇಶ್ವರ, ಶ್ರೀ ಆಂಜನೇಯ ದೇವರುಗಳಿಗೆ ಬ್ರಾಹ್ಮೀ ಮೂಹೂರ್ತದಲ್ಲಿ ಅಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನೇರವೇರಿತು.
ಬೆಳಗ್ಗೆ ತುಂಗಭದ್ರಾ ನದಿಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದ ನಂತರ ವಿವಿಧ ವಾದ್ಯಗಳೊಂದಿಗೆ ನದಿಯಿಂದ ಮಾತೆಯರು ಕುಂಭಮೇಳ ಹೊತ್ತು ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಆಗಮಿಸಿದರು.
ಇದೇ ಮೊದಲ ಬಾರಿಗೆ ಶ್ರೀ 108 ಲಿಂಗೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವವು ಮಂಗಳ ವಾದ್ಯಗಳೊಂದಿಗೆ ಭರಂಪುರ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮಧ್ಯಾಹ್ನ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ದೇವಸ್ಥಾನ ಸಮಿತಿ ರೇವಣಸಿದ್ದಪ್ಪ ಬೆಣ್ಣೆ, ಡಿ.ಜಿ. ಶಿವಾನಂದಪ್ಪ, ಶಿವಕುಮಾರ ಕಂಚಿಕೇರಿ, ಸಿದ್ದಪ್ಪ ಬೆಣ್ಣಿ, ಜಿ.ಬಿ. ಮಾಲತೇಶ್, ಗಣೇಶ್ ಕುಂಬಾರ್, ಮಜ್ಜಗಿ ಚಂದ್ರಪ್ಪ, ಅರ್ಚಕ ಮಹಾರುದ್ರಪ್ಪ, ಗಜೇಂದ್ರ, ರುದ್ರಮುನಿ, ಪರಮೇಶ್ವರಪ್ಪ, ಯಲ್ಲಪ್ಪ, ಹರಪನಹಳ್ಳಿ ಬಸವರಾಜಪ್ಪ, ಕರಿಬಸಪ್ಪ ಕಂಚಿಕೇರಿ, ಡಿ.ಜಿ. ಶಿವಾನಂದಪ್ಪ, ಸಮಾಳದ ಚಂದ್ರಶೇಖರ್, ನಿವೃತ್ತ ಯೋಧ ರಾಜಶೇಖರ, ಪೂಜಾರ್ ಈಶ್ವರ್ ಸೇರಿದಂತೆ ಮಹಿಳೆಯರು ಭಾಗವಹಿಸಿದ್ದರು.