100 ಚಾನೆಲ್​ಗಳಿಗೆ 153 ರೂ.

ನಾಗಪುರ: ಕೇಬಲ್ ಟಿವಿ ವೀಕ್ಷಕರಿಗೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸಂಕ್ರಾಂತಿ ಸಂದರ್ಭದಲ್ಲಿ ಸಿಹಿ ಸುದ್ದಿ ನೀಡಿದೆ. ವೀಕ್ಷಕರು ಆಯ್ಕೆ ಮಾಡುವ ಯಾವುದೇ 100 ಪೇ ಅಥವಾ ಫ್ರೀ ಚಾನೆಲ್​ಗಳನ್ನು 153 ರೂ. ಗೆ ನೀಡುವಂತೆ ಡಿಟಿಎಚ್/ಕೇಬಲ್ ಆಪರೇಟರ್​ಗಳಿಗೆ ಸೂಚಿಸಿದೆ. ಇದು ಫೆ. 1ರಿಂದ ಜಾರಿಗೆ ಬರಲಿದೆ. ಈ ಶುಲ್ಕದಲ್ಲಿ ಜಿಎಸ್​ಟಿ ಕೂಡ ಸೇರಿದೆ ಎಂದು ಟ್ರಾಯ್ ಸ್ಪಷ್ಟ ಪಡಿಸಿದೆ.

ಟ್ರಾಯ್ ನೀಡಿರುವ ಈ ಪ್ಯಾಕೇಜ್​ನಲ್ಲಿ ಎಚ್​ಡಿ (ಹೈ ಡಿಫಿನಿಷನ್) ಚಾನಲ್​ಗಳು ಇಲ್ಲ. ಆದರೆ ಕೆಲವು ಮೂಲಗಳ ಪ್ರಕಾರ, ವೀಕ್ಷಕರು 2 ಎಚ್​ಡಿಯೇತರ ಚಾನೆಲ್​ಗಳ ಬದಲಿಗೆ ಒಂದು ಎಚ್​ಡಿ ಚಾನಲ್ ಆಯ್ಕೆ ಮಾಡಿಕೊಳ್ಳುವ ಆಯ್ಕೆ ಇದೆ. ಇದನ್ನು ವೀಕ್ಷಕರು, ಸೇವಾದಾತರರ ಬಳಿ ಖಚಿತ ಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

100 ಚಾನೆಲ್​ಗೆ 153 ರೂ. ಶುಲ್ಕದ ಬಗ್ಗೆ ಅನುಮಾನಗಳಿದ್ದರೆ ದೂರವಾಣಿ ಸಂಖ್ಯೆ 011-23237922 (ಎ.ಕೆ. ಭಾರದ್ವಾಜ್) ಮತ್ತು 011-23220209 (ಅರವಿಂದ ಕುಮಾರ್)ಗೆ ಕರೆ ಮಾಡಬಹುದು ಅಥವಾ [email protected] or [email protected] ವೆಬ್​ಸೈಟ್​ಗೆ ಇಮೇಲ್ ಕಳುಹಿಸಿ ಪರಿಹರಿಸಿಕೊಳ್ಳಬಹುದು ಎಂದು ಟ್ರಾಯ್ ಹೇಳಿದೆ.

ಪ್ರತಿ ಚಾನಲ್​ಗೆ ತಿಂಗಳಿಗೆ ಗರಿಷ್ಠ -ಠಿ; 19 ನಿಗದಿ ಪಡಿಸಬಹುದು ಎಂದು ಸೂಚಿಸಿರುವ ಟ್ರಾಯ್, ಕೇಬಲ್ ಟಿವಿ ವೀಕ್ಷಕರು ಲಾ ಕಾರ್ಟೆ ಮಾದರಿಯ (ಪೇ ಚಾನೆಲ್ ಬಿಡಿ ಆಯ್ಕೆ) ಚಾನಲ್​ಗಳನ್ನು ಆಯ್ಕೆ ಮಾಡುಕೊಳ್ಳುವಂತೆ ಸಲಹೆ ನೀಡಿದೆ. ಚಾನೆಲ್​ಗಳ ಗುಚ್ಛ ಆಯ್ಕೆ ಮಾಡಿಕೊಳ್ಳುವ ಅಗತ್ಯ ಇಲ್ಲ ಎಂದೂ ತಿಳಿಸಿದೆ. – ಏಜೆನ್ಸೀಸ್

ಶೇ.18 ಜಿಎಸ್​ಟಿ

ಟ್ರಾಯ್ನ ಹೊಸ ಆದೇಶದಿಂದ ಕಾಪೋರೇಟ್ ಸಂಸ್ಥೆಗಳಿಗೆ ಲಾಭವಾದರೆ, ಕೇಬಲ್ ಆಪರೇಟರ್​ಗಳನ್ನು ಬೀದಿಗೆ ತಳ್ಳುವ ಹುನ್ನಾರ ನಡೆಯುತ್ತಿದೆ. 2ನೇ ಹಂತದ ನಗರಗಳಿಗೆ 300ರಿಂದ 350 ರೂ.ಗೆ ಅಂದಾಜು 450 ಚಾನೆಲ್, 3ನೇ ಹಂತದ ನಗರಗಳಿಗೆ 200ರಿಂದ 250 ರೂ.ಗೆ ಅಂದಾಜು 350 ಚಾನೆಲ್, 4ನೇ ಹಂತದ ನಗರಗಳಿಗೆ 150ರಿಂದ 200 ರೂ.ಗೆ ಅಂದಾಜು 250 ಚಾನೆಲ್ ಹಿಂದಿನ ಆದೇಶದಂತೆ ನೀಡಲಾಗುತ್ತಿತ್ತು. ಆದರೆ, ಹೊಸ ಆದೇಶದಿಂದಾಗಿ ಶೇ.18 ಜಿಎಸ್​ಟಿ ವಿಧಿಸಿರುವುದರಿಂದ ತಿಂಗಳಿಗೆ ಕಟ್ಟುವ ಶುಲ್ಕದಲ್ಲಿ 50 ರೂ. ಹೆಚ್ಚುವರಿ ತೆರಿಗೆ ಕಟ್ಟಬೇಕಾಗುತ್ತದೆ. ಇದರಿಂದಾಗಿ ಬಡ-ಮಧ್ಯಮ ವರ್ಗದ ಕುಟುಂಬಗಳಿಗೆ ತೊಂದರೆ ಆಗಲಿದೆ ಎಂದು ವಿ.ಎಸ್. ಪ್ಯಾಟ್ರಿಕ್ ರಾಜು ಹೇಳಿದರು.

24ರಂದು ಕೇಬಲ್ ಬಂದ್

ಬೆಂಗಳೂರು: ಟ್ರಾಯ್ ಹೊಸ ನೀತಿ ಅವೈಜ್ಞಾನಿಕ ಎಂದು ಖಂಡಿಸಿ ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್ ಅಸೋಸಿಯೇಷನ್ ಜ.24ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.

ಬೆಳಿಗ್ಗೆ 6ರಿಂದ ರಾತ್ರಿ 10ರ ವರೆಗೆ ಇಡೀ ದಕ್ಷಿಣ ಭಾರತದಲ್ಲಿ ಕೇಬಲ್ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅಸೋಸಿಯೇಷನ್ ಅಧ್ಯಕ್ಷ ವಿ.ಎಸ್. ಪ್ಯಾಟ್ರಿಕ್ ರಾಜು ತಿಳಿಸಿದ್ದಾರೆ.

ಟ್ರಾಯ್ ಹೊಸ ಆದೇಶದ ಮೂಲಕ ಗ್ರಾಹಕರು ಮತ್ತು ಕೇಬಲ್ ಆಪರೇಟರ್​ಗಳ ನಡುವೆ ಗೊಂದಲ ಮೂಡಿಸಲಾಗುತ್ತಿದೆ. ಹಿಂದಿನ ಆದೇಶದಲ್ಲಿ 130 ರೂ.ಗೆ 100 ಫ್ರೀ ಟು ಏರ್ ಚಾನೆಲ್ ನೀಡಲಾಗುತ್ತಿತ್ತು. ಆದರೆ, ಹೊಸ ಆದೇಶದಲ್ಲಿ ಶೇ.18 ಜಿಎಸ್​ಟಿ ಸೇರಿ 154 ರೂ.ಗೆ 100 ಚಾನೆಲ್ ಎಂದಿದೆ. ಇದರಲ್ಲಿ ಪೇ ಚಾನೆಲ್ ಅಥವಾ ತಮ್ಮಿಷ್ಟದ ಚಾನೆಲ್ ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ಗ್ರಾಹಕರು ಪೇ ಚಾನೆಲ್ ಆಯ್ಕೆ ಮಾಡಿಕೊಂಡರೆ ತಿಂಗಳಿಗೆ 1500 ರೂ.ರಿಂದ 2 ಸಾವಿರವರೆಗೆ ಕೇಬಲ್ ಶುಲ್ಕ ಕಟ್ಟಬೇಕಾಗುತ್ತದೆ ಎಂದರು.

ಕಾಪೋರೇಟ್ ಸಂಸ್ಥೆಗೆ ಲಾಭ ತಂದುಕೊಡಲು ಕೇಂದ್ರ ಸರ್ಕಾರ ಹೊಸ ಅವೈಜ್ಞಾನಿಕ ಆದೇಶ ಜಾರಿಗೆ ತಂದಿದೆ. ಕೇಬಲ್ ಅಪರೇಟರ್​ಗಳ ಜತೆ ರ್ಚಚಿಸದೆ ದೇಶಾದ್ಯಂತ ಏಕರೂಪ ನೀತಿ ಜಾರಿಗೆ ತಂದಿರುವುದು ಸರಿ ಇಲ್ಲ.

| ವಿ.ಎಸ್. ಪ್ಯಾಟ್ರಿಕ್ ರಾಜು ಅಧ್ಯಕ್ಷ, ಕರ್ನಾಟಕ ರಾಜ್ಯ ಕೇಬಲ್ ಅಪರೇಟರ್ ಅಸೋಸಿಯೇಷನ್

One Reply to “100 ಚಾನೆಲ್​ಗಳಿಗೆ 153 ರೂ.”

Comments are closed.