ಗಾಜಾ: ಪೂರ್ವ ಗಾಜಾದ ವಸತಿ ಶಾಲೆಯನ್ನು ಟಾರ್ಗೆಟ್ ಮಾಡಿದ ಇಸ್ರೇಲ್, ಕಟ್ಟಡದ ಮೇಲೆ ಏಕಾಏಕಿ ದಾಳಿ ನಡೆಸಿದೆ. ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಇನ್ನೂ ಹಲವರು ಕಟ್ಟಡದ ಅವೇಶಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಕಳೆದ ವಾರ ಇದೇ ರೀತಿ ಗಾಜಾದ ಮೂರು ಶಾಲೆಗಳ ಮೇಲೆ ಇಸ್ರೇಲ್ ಡೆಡ್ಲಿ ಅಟ್ಯಾಕ್ ನಡೆಸಿತ್ತು. ಇದೀಗ ಮತ್ತೊಮ್ಮೆ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ.
ಇದೇ ರೀತಿ ಆಗಸ್ಟ್ 4ರಂದು ಗಾಜಾ ನಗರದಲ್ಲಿ ಸ್ಥಳಾಂತರಗೊಂಡ ಜನರಿಗೆ ಆಶ್ರಯ ಕೊಟ್ಟು, ಸೇವೆ ಸಲ್ಲಿಸುತ್ತಿದ್ದ ಶಾಲೆಯ ಮೇಲೆ ದಾಳಿ ನಡೆಸಿದ ಇಸ್ರೇಲ್, 30 ಜನರ ಪ್ರಾಣವನ್ನು ಕಸಿದುಕೊಂಡಿತು. ಈ ದಾಳಿಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಅದರ ಹಿಂದಿನ ದಿನ ಗಾಜಾ ನಗರದ ಹಮಾಮಾ ಸ್ಕೂಲ್ ಮೇಲೂ ದಾಳಿ ನಡೆಸಿ, 17 ಜನರನ್ನು ಬಲಿಪಡೆಯಿತು,(ಏಜೆನ್ಸೀಸ್).