ವಿಕಲಾಂಗ ಅಪ್ರಾಪ್ತೆ ಮೇಲೆ ಅತ್ಯಾಚಾರ, ಬಾಲಕಿ ಸಾವು!

ಉಲುಬೇರಿಯಾ: 10 ವರ್ಷದ ವಿಕಲಾಂಗ ಬಾಲಕಿಯ ಮೇಲೆ ಯುವಕ ಅತ್ಯಾಚಾರ ಎಸಗಿದ್ದು, ಬಾಲಕಿ ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಸಿಮುಲಿಯಾ ಪ್ರದೇಶದಲ್ಲಿ ನಡೆದಿದೆ.

ಕಿವುಡು ಮತ್ತು ಮೂಕ ಬಾಲಕಿಯನ್ನು ಆಕೆಯ ನಿವಾಸದ ಬಳಿಯ ಶೌಚಗೃಹದೊಳಗೆ ಸೋಮವಾರ ಅತ್ಯಾಚಾರ ಎಸಗಲಾಗಿತ್ತು.

ಆದರೆ ಗುರುವಾರದ ವೇಳೆಗೆ ಘಟನೆ ಬೆಳಕಿಗೆ ಬಂದಿದೆ. ಕೆಲ ದಿನದಿಂದ ಬಾಲಕಿಯ ನಡವಳಿಕೆಯು ವಿಚಿತ್ರವಾಗಿರುವುದು ಮತ್ತು ಮೂತ್ರದ ಸಮಸ್ಯೆಯನ್ನು ಎದುರಿಸುತ್ತಿರುವುದನ್ನು ಆಕೆಯ ತಾಯಿ ಗಮನಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಪರೀಕ್ಷೆ ನಡೆಸಿದ ವೈದ್ಯರು ಆಕೆಯ ಮೇಲೆ ಅತ್ಯಾಚಾರ ಎಸಗಿರುವುದನ್ನು ಖಾತರಿ ಪಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಉಲುಬೇರಿಯಾ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ 18 ವರ್ಷದ ಆರೋಪಿಯನ್ನು ಶುಕ್ರವಾ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಯನ್ನು 7 ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡಲಾಗಿದೆ. (ಏಜೆನ್ಸೀಸ್)