ಮೂರು ವಾಹನಗಳ ನಡುವೆ ಭೀಕರ ಅಪಘಾತ : 10 ಜನರು ಸಾವು, 6 ಮಂದಿಗೆ ಗಂಭೀರ ಗಾಯ

ಆನಂದ್​: ಟ್ಯಾಂಕರ್​, ಟ್ರಕ್​ ಹಾಗೂ ಪಿಕ್​ಅಪ್​ ವಾಹನಗಳ ನಡುವೆ ಉಂಟಾದ ಸರಣಿ ಅಪಘಾತದಲ್ಲಿ 10 ಜನರು ಮೃತಪಟ್ಟಿದ್ದು, ಸುಮಾರು 6 ಮಂದಿ ಗಂಭೀರವಾಗಿ ಗಾಯಗೊಂಡ ದುರ್ಘಟನೆ ಗುಜರಾತ್​ನ ಆನಂದ್​ ಜಿಲ್ಲೆಯ ಗಂಭೀರಾ ಹಳ್ಳಿಯಲ್ಲಿ ನಡೆದಿದೆ.

ಪಿಕ್​ ಅಪ್​ ವಾಹನದಲ್ಲಿ ಇದ್ದವರೆಲ್ಲರೂ ಮೃತಪಟ್ಟಿದ್ದು, ಅವರೆಲ್ಲರೂ ಆನಂದ್​ ಜಿಲ್ಲೆಯವರೇ. ವಡೋದರಾದ ಖಾಸಗಿ ಕಂಪನಿಯೊಂದರ ಉದ್ಯೋಗಿಗಳು. ಪ್ರತಿದಿನವೂ ಕಂಪನಿಗೆ ಕರೆದೊಯ್ಯಲು ಈ ಪಿಕ್​ಅಪ್​ ವಾಹನ ಬರುತ್ತಿತ್ತು.

ಸ್ಥಳಕ್ಕೆ ಆನಂದ್​ ಜಿಲ್ಲೆಯ ಎಸ್ಪಿ ಸೇರಿ ಸ್ಥಳೀಯ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *