ಲಖನೌ: ಉತ್ತರ ಪ್ರದೇಶದಲ್ಲಿ ಕರೊನಾ ನಿರ್ವಹಣೆ ವಿಫಲವಾದ ವಿಚಾರದಲ್ಲಿ ರಾಜ್ಯ ಸರ್ಕಾರದ ಬಗ್ಗೆ ವಿರೋಧ ಪಕ್ಷಗಳ ಜತೆ ಬಿಜೆಪಿಯ ಕೆಲ ನಾಯಕರೂ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದಾರೆ. ಕರೊನಾದ ಮೊದಲ ಅಲೆಯಲ್ಲಿ ಯಾವುದೇ ಪಾಠಗಳನ್ನು ಕಲಿಯದ ಕಾರಣ ಎರಡನೇ ಅಲೆಯಲ್ಲಿ ಪ್ರತಿ ಹಳ್ಳಿಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುವಾಗ, ಉತ್ತರ ಪ್ರದೇಶ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ರಾಮ್ ಇಕ್ಬಾಲ್ ಸಿಂಗ್ ಅವರು “ಕೋವಿಡ್ 19ರ ಮೊದಲ ಅಲೆಯಿಂದ ಆರೋಗ್ಯ ಇಲಾಖೆಯು ಯಾವುದೇ ಪಾಠವನ್ನು ಕಲಿಯಲಿಲ್ಲ. ಇದು ಎರಡನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯ ಸಾವಿಗೆ ಕಾರಣವಾಯಿತು. ಎರಡನೇ ಅಲೆಯಲ್ಲಿ ರಾಜ್ಯದ ಪ್ರತಿ ಹಳ್ಳಿಯಿಂದ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ” ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ದಾರಿ ತಪ್ಪಿಸಿದ್ದಾರೆ ಮತ್ತು ಸತ್ಯವನ್ನು ಮುಚ್ಚಿಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಕರೊನಾದಿಂದಾಗಿ ಮೃತರಾದವರ ಕುಟುಂಬಗಳಿಗೆ 10 ಲಕ್ಷ ರೂ.ಗಳ ಎಕ್ಸ್-ಗ್ರೇಟಿಯಾವನ್ನು ಹಾಗೂ ರಾಜ್ಯದ ರೈತರಿಗೆ ಡೀಸೆಲ್ ಸಬ್ಸಿಡಿ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಹಿಂದೆ, ಬಿಜೆಪಿಯ ಸೀತಾಪುರ ಶಾಸಕ ರಾಕೇಶ್ ರಾಥೋಡ್ ಅವರು ರಾಜ್ಯದಲ್ಲಿ ಕೋವಿಡ್ 19 ನಿರ್ವಹಣೆ ವಿಫಲತೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು ಮತ್ತು ಈ ರೀತಿ ಮಾತನಾಡಿದ್ದಕ್ಕಾಗಿ ದೇಶದ್ರೋಹ ಆರೋಪ ಹೊರಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಮೇ 9 ರಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರು ತಮ್ಮ ಬರೇಲಿ ಕ್ಷೇತ್ರದ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗೆ ದೂರು ನೀಡಿದ್ದರು. ಅಧಿಕಾರಿಗಳು ಕರೆಗಳನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಸರ್ಕಾರಿ ಆರೋಗ್ಯ ಕೇಂದ್ರಗಳು ರೋಗಿಗಳನ್ನು ಜಿಲ್ಲಾ ಆಸ್ಪತ್ರೆಯಿಂದ ಉಲ್ಲೇಖಗಳಿಗಾಗಿ ವಾಪಸ್ ಕಳುಹಿಸುತ್ತವೆ ಎಂದು ಹೇಳಿದರು. ಈ ಹಿಂದೆ ಈ ರೀತಿಯ ಅನೇಕ ದೂರುಗಳು ಕೇಳಿಬಂದಿವೆ. (ಏಜೆನ್ಸೀಸ್)
#BBK8: ಸೆಕೆಂಡ್ ಇನ್ನಿಂಗ್ಸ್ ಮೊದಲನೇ ವಾರವೇ ಪ್ರಶಾಂತ್ ಔಟ್! ಯಾರ ಕಣ್ಣಿಗೂ ಕಾಣದಂತಾದ ಸಂಬರಗಿ!
ಮೊದಲು ಎಲ್ಲರಿಗೂ ಲಸಿಕೆ ಕೊಡಿ, ಆಮೇಲೆ ಮನ್ ಕೀ ಬಾತ್ ಮಾಡಬಹುದು: ರಾಹುಲ್ ಗಾಂಧಿ