ಬೆಳಗಾವಿ ಏಡ್ಸ್ ಪೀಡಿತ ಮಕ್ಕಳ ಕಲ್ಯಾಣಕ್ಕೆ 10 ಲಕ್ಷ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಘೋಷಣೆ

ಬೆಳಗಾವಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬೆಳಗಾವಿಯ ಏಡ್ಸ್ ಪೀಡಿತ ಮಕ್ಕಳ ಕಲ್ಯಾಣಕ್ಕೆ 10 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ. ಸಲ್ಮಾನ್ ಖಾನ್ ನಡೆಸುವ ‘ದಸ್ ಕಾ ದಮ್’ ಕಾರ್ಯಕ್ರಮದ ಸೆಲೆಬ್ರಿಟಿ ಗೆಸ್ಟ್‌ಗಳಾಗಿದ್ದ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ತಾವು ಗೆದ್ದ ಬಹುಮಾನದಲ್ಲಿ 10 ಲಕ್ಷ ರೂ. ಬೆಳಗಾವಿ ಏಡ್ಸ್ ಪೀಡಿತ ಮಕ್ಕಳ ಕಲ್ಯಾಣಕ್ಕೆ ನೀಡುವುದಾಗಿ ಹೇಳಿದ್ದಾರೆ.

ಪರ‌್ಹಾ ಖಾನ್ ಅವರನ್ನು ಅಂತಿಮ ಸುತ್ತಿನಲ್ಲಿ ಪರಾಭವಗೊಳಿಸಿ ಶಿಲ್ಪಾ ಶೆಟ್ಟಿ ವಿಜೇತರಾಗಿದ್ದರು. ಶಿಲ್ಪಾ ಶೆಟ್ಟಿ ಫೌಂಡೇಶನ್ ಮೂಲಕ ಬಡ ಮಕ್ಕಳ ಅಭಿವೃದ್ಧಿಗೆ ದುಡಿಯುತ್ತಿರುವ ಶಿಲ್ಪಾ ಶೆಟ್ಟಿ, ಏಡ್ಸ್ ಪೀಡಿತ ಮಕ್ಕಳಿಗಾಗಿ ಬೆಳಗಾವಿಯಲ್ಲಿ ವಸತಿಗೃಹ ಹಾಗೂ ಶಾಲೆಯನ್ನು ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ, ಯಾವ ಸಂಸ್ಥೆಗೆ ಎಂದು ಅವರು ಸ್ಪಷ್ಟಪಡಿಸಿಲ್ಲ.