10 ರೂ. ನಾಣ್ಯಕ್ಕೆ ಬೆಲೆಯಿಲ್ಲ!

ಮಂಡ್ಯ: ಆರ್‌ಬಿಐ ಹೊರತಂದಿರುವ ಹತ್ತು ರೂ. ನಾಣ್ಯಗಳಿಗೆ ಬೆಲೆ ಇಲ್ಲ ಎಂಬ ಭಾವನೆ ಮತ್ತಷ್ಟು ಹೆಚ್ಚಿದ್ದು, ಯಾರೊಬ್ಬರು ಕೂಡ ಅವುಗಳನ್ನು ಪಡೆದುಕೊಳ್ಳದ್ದರಿಂದ ಸಮಸ್ಯೆ ಉದ್ಭ ವಿಸಿದೆ.
10 ರೂ. ನಾಣ್ಯಗಳು ನಡೆಯಲ್ಲ. ನಾವು ತೆಗೆದು ಕೊಳ್ಳುವುದಿಲ್ಲ ಎನ್ನುವ ಅಂಗಡಿಯವರು, ಹೋಟೆಲ್, ಪೆಟ್ರೋಲ್ ಬಂಕ್ ನವರು ಹೇಳುತ್ತಿದ್ದಾರೆ.
ನಕಲಿ ನೋಟುಗಳ ಹಾವಳಿ ತಪ್ಪಿಸುವ ಕಾರಣದಿಂದ ಬಂದ ನಾಣ್ಯಗಳನ್ನು ಅನೇಕ ಜನತೆ ಸಂಗ್ರಹಿಸಿಟ್ಟುಕೊಂಡಿದ್ದು, ತುರ್ತು ಸಮಸ್ಯೆಗೆಂದು ಅವುಗಳನ್ನು ತೆಗೆದುಕೊಂಡು ಬಂದರೆ ಅದಕ್ಕೆ ಬೆಲೆಯಿಲ್ಲ. ಬ್ಯಾಂಕುಗಳಿಗೆ ಹೋಗಿ ಕಟ್ಟಿ ಎಂಬ ಸಿದ್ಧ ಉತ್ತರ ಸಿಗುತ್ತಿದೆ.
ಹಿಂದೆ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾದಾಗ ಬ್ಯಾಂಕಿನವರು ಯಾವುದೇ ಸಮಸ್ಯೆಯಿಲ್ಲ. ನಾಣ್ಯ ಚಲಾವಣೆಯಲ್ಲಿದ್ದು, ಸ್ವೀಕರಿಸಬಹುದು ಎಂದು ಸ್ಪಷ್ಟಪ ಡಿಸಿದ್ದರು. ಆಗ ಕೆಲ ದಿನಗಳ ತನಕ ಯಾವುದೇ ಅಡ್ಡಿಯಿ ರಲಿಲ್ಲ. ಆದರೀಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗಾಗಿ ಜನತೆ ನೂರಿನ್ನೂರು ನ್ಯಾಣ್ಯಗಳನ್ನು ಬ್ಯಾಂಕಿಗೆ ಕೊಂಡೋಯ್ದು ಖಾತೆಗೆ ಹಾಕುವವರ‌್ಯಾರೆಂದು ಸುಮ್ಮ ನಿದ್ದರೆ, ಸಹಕಾರಿ ಬ್ಯಾಂಕುಗಳು ಆ ನಾಣ್ಯಗಳನ್ನು ಪಡೆ ಯಲು ನಿರಾಕರಿಸುತ್ತಿವೆ ಎಂಬ ದೂರುಗಳು ಕೇಳಿ ಬರುತ್ತಿ ದ್ದು, ಈ ಸಂಬಂಧಪಟ್ಟವರು ತಕ್ಷಣ ಸಮಸ್ಯೆ ಪರಿಹರಿ ಸಬೇಕೆಂದು ಹೋರಾಟಗಾರ ಇಂಡುವಾಳು ಬಸವರಾಜು ಒತ್ತಾಯಿಸಿದ್ದಾರೆ.