More

  10 ಭಾಷೆಗಳಲ್ಲಿ ಮೇಘದೂತ ಆಪ್

  ರಾಣೆಬೆನ್ನೂರ : ರೈತರಿಗಾಗಿ ಮೇಘದೂತ ಅಪ್ಲಿಕೇಷನ್ ರಚಿಸಲಾಗಿದ್ದು, ಪ್ರತಿಯೊಬ್ಬ ರೈತರು ಡೌನ್​ಲೋಡ್ ಮಾಡಿಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಬಿ. ಹೇಳಿದರು.

  ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮತ್ತು ಭಾರತ ಹವಾಮಾನ ಇಲಾಖೆ ಸಹಯೋಗದಲ್ಲಿ ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ‘ಹವಾಮಾನ ಬದಲಾವಣೆ ಮತ್ತು ಕೃಷಿ ಮೇಲೆ ಅದರ ಪರಿಣಾಮ’ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

  ಮೇಘದೂತ ಅಪ್ಲಿಕೇಷನ್ ರೈತರಿಗೆ ಹತ್ತು ಭಾಷೆಗಳಲ್ಲಿ ಜಿಲ್ಲಾವಾರು ಹವಾಮಾನ ಆಧಾರಿತ ಕೃಷಿ ಕುರಿತ ಸಲಹೆಗಳನ್ನು ನೀಡುತ್ತದೆ. ಈ ಅಪ್ಲಿಕೇಷನ್ ರೈತರಿಗೆ ಮುಂದಿನ ಐದು ದಿನಗಳ ಹವಾಮಾನ ಆಧಾರಿತ ನಿಯತಾಂಶಗಳಾದ ಮಳೆ, ಆರ್ದ್ರತೆ, ಉಷ್ಣಾಂಶ, ಗಾಳಿಯ ವೇಗ ಹಾಗೂ ಗಾಳಿಯ ದಿಕ್ಕಿನ ಮೂನ್ಸೂಚನೆ ನೀಡುತ್ತದೆ. ಈ ಮಾಹಿತಿಯನ್ನು ವಾರಕ್ಕೆ ಎರಡು ಬಾರಿ (ಪ್ರತಿ ಮಂಗಳವಾರ ಮತ್ತು ಶುಕ್ರವಾರ) ಜಿಲ್ಲಾ ಕೃಷಿ ಹವಾಮಾನ ಘಟಕದಿಂದ ನವೀಕರಿಸಲಾಗುತ್ತದೆ. ಕೇವಲ ಕೃಷಿ ಮತ್ತು ತೋಟಗಾರಿಕೆಗಷ್ಟೇ ಸೀಮಿತವಾಗದೆ ಹೈನುಗಾರಿಕೆ ಮಾಹಿತಿಯನ್ನು ಕೊಡುತ್ತದೆ. ಕುರಿ, ಕೋಳಿ ಇತ್ಯಾದಿ ಜಾನುವಾರುಗಳಿಗೆ ತಗುಲುವ ಕಾಯಿಲೆ ಮತ್ತು ಅವುಗಳ ಹತೋಟಿ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು.

  ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಅಶೋಕ ಪಿ., ಪ್ರಮುಖರಾದ ಡಾ. ಜಿ.ಆರ್. ರಾಜ್​ಕುಮಾರ, ಡಾ. ಶ್ರೀಪಾದ ಕುಲಕರ್ಣಿ, ಡಾ. ಯು.ಕೆ. ಹುಲಿಹಳ್ಳಿ, ಡಾ. ಆರ್.ಎಚ್. ಪಾಟೀಲ, ಡಾ. ಪ್ರವೀಣಕುಮಾರ ಗುಳೇದ, ಡಾ. ಆರ್.ಬಿ. ಬಸವರಾಜಪ್ಪ, ಡಾ. ಕೆ.ಪಿ. ಗುಂಡಣ್ಣವರ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts